ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಪುಷ್ಪಾಲಂಕಾರಕ್ಕೆ ರೂ 1೦ ಲಕ್ಷ ಕೊಡುಗೆ

0

ಉಜಿರೆ: ಬೆಂಗಳೂರಿನ ಕೈಗಾರಿಕೋದ್ಯಮಿ ಹಾಗು ಚಿತ್ರ ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಮ 3 ರಿಂದ 11 ರವರೆಗೆ ನಡೆಯಲಿರುವ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಿಜಯ ಗೋಪುರ ಸಮರ್ಪಣೆಯ ಪುಷ್ಪಾಲಂಕಾರ , ಬ್ರಹ್ಮ ರಥ ಮತ್ತು ಪುಷ್ಪ ರಥ ಸಮರ್ಪಣೆಯ ಪುಷ್ಪಾಲಂಕಾರ ಹಾಗೂ ಬ್ರಹ್ಮಕಲಶೋತ್ಸವದ ವೇಳೆ ದೇವಸ್ಥಾನಕ್ಕೆ ವಿಶೇಷ ಪುಷ್ಪಾಲಂಕಾರಕ್ಕೆ ತಗುಲುವ ಒಟ್ಟು ರೂ 10 ಲಕ್ಷ ವೆಚ್ಚದ ಸೇವೆಯ ಕೈಂಕರ್ಯವನ್ನು ನಡೆಸಲು ಸಂಕಲ್ಪಿಸಿದ್ದು ಅದರ ಮೊದಲ ಕಂತು ರೂಪಾಯಿ ಐದು ಲಕ್ಷ ಮೊತ್ತವನ್ನು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿಯ ಮೂಲಕ ನೀಡಿ ಸಹಕರಿಸಿದ್ದಾರೆ .

ಅವರಿಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಆಹ್ವಾನಿಸಲಾಯಿತು . ಅವರಿಗೆ ಶ್ರೀ ದೇವಸ್ಥಾನ ಹಾಗು ಬ್ರಹ್ಮ ಕಲಶೋತ್ಸವ ಸಮಿತಿ ಪರವಾಗಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕೃತಜ್ಞತೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here