







ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಮಂಜುಳೇಶನ ಸನ್ನಿಧಿಯಲ್ಲಿ ಶ್ರೀ ಮಹಾಶಿವರಾತ್ರಿ ಪ್ರಯುಕ್ತ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ ಹೊಳ್ಳ,,ರಾಮಚಂದ್ರ ಹೊಳ್ಳ, ವೇದಮೂರ್ತಿ ಶ್ರೀಪತಿ ಎಳಚಿತ್ತಾಯ ಮತ್ತು ಡಾ!ಶ್ರೀಧರ ಭಟ್ ಅವರ ಉಪಸ್ಥಿತಿಯಲ್ಲಿ ಬೆಳಿಗ್ಗೆ ತಾಲೂಕಿನ ವಿಪ್ರ ಬಾಂಧವರಿಂದ ಸಾಮೂಹಿಕ ರುದ್ರಾಧ್ಯಾಯ ಪಠಣ, ಶತ ರುದ್ರಾಭಿಷೇಕ ,ವಿಶೇಷ ಅರ್ಚನೆ, ಪೂಜೆ ನಡೆಯಿತು. ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದು,ಸೇವೆ ಸಲ್ಲಿಸಿದರು.



ಸಂಜೆ ನಿರಂತರ ಭಜನಾ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿ, ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ಶ್ರೀ ಛತ್ರಪತಿ ಶಿವಾಜಿ ಭಜನಾ ಮಂಡಳಿ, ಶ್ರೀ ಮಾತೃ ಮಂಡಳಿ, ಶ್ರೀ ದುರ್ಗಾ ಭಜನಾ ಮಂಡಳಿ, ಶ್ರೀ ಹರೇ ಕೃಷ್ಣ ಭಜನಾ ಮಂಡಳಿ, ವಿನಾಯಕ ನಗರದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಬೆಳ್ತಂಗಡಿಯ ವಿವೇಕ ಜಾಗೃತ ಬಳಗ ಹಾಗು ಉಜಿರೆ ಮಾಚಾರು ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಭಜನೆಯಲ್ಲಿ ಪಾಲ್ಗೊಂಡ ಸದಸ್ಯರನ್ನು ಕ್ಷೇತ್ರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು.









