






ಮುಂಡಾಜೆ :ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಆಡಳಿತಾಧಿಕಾರಿ ಬೆಳ್ತಂಗಡಿ ಪಶುಸಂಗೋಪನಾ ವೈದ್ಯಾಧಿಕಾರಿ ಆಡಳಿತ ಡಾ. ರವಿ ಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಫೆ. 13 ರಂದು ನಡೆಯಿತು.



ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್ ಎನ್, ನೋಡೆಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಕಂದಾಯ ಇಲಾಖೆ, ಜಲಜೀವನ್, ಮುಂಡಾಜೆ ಸೊಸೈಟಿ, ವೈದ್ಯಧಿಕಾರಿ, ಬ್ಯಾಂಕ್ ಸಿಬ್ಬಂದಿಗಳು, ಪಶು ಮತ್ತು ಕೃಷಿ ಸಖಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಸ್ವಾಗತಿಸಿ ವರದಿ ನೀಡಿದರು. ಪಂಚಾಯತ್ ಕಾರ್ಯದರ್ಶಿ ನಾಗವೇಣಿ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯನ್ನು ಪ್ರಸ್ತಾಪಿಸಿದರು.



ಪಂಚಾಯತ್ ಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು









