









ಬೆಳ್ತಂಗಡಿ: ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವ ಸಂಭವವಿರುವುದರಿಂದ ಗಡಾಯಿಕಲ್ಲು ಚಾರಣ ಪ್ರವೇಶಕ್ಕೆ ಫೆ.6ರಿಂದ ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಗಡಾಯಿಕಲ್ಲಿನ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು, ಕಾಡಿಚ್ಚಿನ ಮುಂಜಾಗ್ರತೆಗಾಗಿ ನಿಷೇಧ ಮುಂದುವರಿದಿದೆ ಎಂದು ವನ್ಯಜೀವಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಟಾ ಅವರು ತಿಳಿಸಿದ್ದಾರೆ.









