ಫೆ.7: ಕಾಶಿಬೆಟ್ಟು ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ 26ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನವಗ್ರಹ ಶಾಂತಿಯುಕ್ತ ಶನೈಶ್ಚರ ಶಾಂತಿ ಹೋಮ

0

ಉಜಿರೆ : ಉಜಿರೆ ಕಾಶಿಬೆಟ್ಟು ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ26ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನವಗ್ರಹ ಶಾಂತಿಯುಕ್ತ ಶನೈಶ್ಚರ ಶಾಂತಿ ಹೋಮವು ಮಡಂತ್ಯಾರು ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಫೆ 7ರಂದು ಜರಗಲಿದೆ. ಫೆ. 6 ಶುಕ್ರವಾರ ರಾತ್ರಿ ದೇವತಾ ಪ್ರಾರ್ಥನೆ, ವಾಸ್ತು ರಾಕ್ಶೋಘ್ನ ಹೋಮ, ವಾಸ್ತುಬಲಿ ಇತ್ಯಾದಿ, ಫೆ. 07ನೇ ಶನಿವಾರ ಬೆಳಿಗ್ಗೆ ಗಂಟೆ 8-30ಕ್ಕೆ ನವಕ ಪ್ರಧಾನ ಕಲಾಹೋಮ, ಬೆಳಿಗ್ಗೆ ಗಂಟೆ 10ಕ್ಕೆ ನವಗ್ರಹ ಶಾಂತಿ ಹೋಮ, ಶನೈಶ್ಚರ ಶಾಂತಿ ಹೋಮ ಪ್ರಾರಂಭ, ಗಂಟೆ 12-30ಕ್ಕೆ ಪೂಜೆ, ಪೂರ್ಣಾಹುತಿ, ಮಧ್ಯಾಹ್ನ ಗಂಟೆ 1ಕ್ಕೆ ಶ್ರೀ ಶನೈಶ್ಚರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ನವಗ್ರಹ ಶಾಂತಿ ಮತ್ತು ಶನೈಶ್ಚರ ಶಾಂತಿ ಹೋಮ ಮಾಡಿಸುವವರು ದೇವಸ್ಥಾನಕ್ಕೆ ಸಂಕಲ್ಪ ಮಾಡಲು ವಿವರ ಕೊಡಬೇಕು. ರೂ. 1000/- ಕೊಟ್ಟು ರಶೀದಿ ಪಡೆದುಕೊಳ್ಳಬೇಕು. ಪ್ರತೀ ಶನಿವಾರ ಶ್ರೀ ಕ್ಷೇತ್ರದಲ್ಲಿ ವಿಶೇಷ ಶನಿ ಪೂಜೆ ಇರುತ್ತದೆ. ಬರುವಾಗ ಹೂ ಮತ್ತು ಎಳ್ಳೆಣ್ಣೆ ತರಬಹುದು ಎಂದು ಧರ್ಮದರ್ಶಿ ಡಾ. ಜನಾರ್ಧನ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here