ಮಚ್ಚಿನ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಶ್ರೀ ಈಶ್ವರ ದೇವರ ಬ್ರಹ್ಮಕಲಶದ ಪೂರ್ವಭಾವಿ ಸಭೆ

0

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಶ್ರೀ ಈಶ್ವರ ದೇವರ ಬ್ರಹ್ಮ ಕಲಶದ ಪೂರ್ವಭಾವಿ ಸಭೆಯು ಜ.31 ಶನಿವಾರ ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದಲ್ಲಿ ನಡೆಯಿತು. ಮಾ.29 ರಿಂದ ಮಾ.6 ವರೆಗೆ ಬಳ್ಳಮಂಜ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮ ಕಲಶದ ಪ್ರಯುಕ್ತ ದೇವಸ್ಥಾನದ ವತಿಯಿಂದ ರಚಿಸಿದ ಸಮಿತಿಯ ಸಭೆಯ ಅಧ್ಯಕ್ಷ ವಸಂತ ಗೌಡ ಮರಕಡ, ಗುತ್ತಿನ ಮನೆಯವರು ಊರ ಗಣ್ಯರು ಸಮಿತಿಯ ಸದಸ್ಯರು ಶ್ರಮದಾನ ಮಾಡಿದ ಶ್ರಮಿಕರು ಹಾಗೂ ದೇವಸ್ಥಾನದ ಸಿಬಂದಿ ವರ್ಗದವರ ಉಪಸ್ಥಿತಿಯಲ್ಲಿ ನಡೆಯಿತು. ಕ್ಷೇತ್ರದ ಅನುವಂಶಿಯ ಆಡಳಿತ ಮೊಕ್ತೇಸರರಾದ ಡಾ.ಹರ್ಷ ಸಂಪಿಗೆತ್ತಾಯ ಬ್ರಹ್ಮ ಕಲಶವನ್ನು ಮಾದರಿಯಾಗಿ ವಿಜೃಂಭಣೆಯಿಂದ ನಡೆಸುವ ಬಗ್ಗೆ ರೂಪು ರೇಷೆಗಳನ್ನು ವಿವರಿಸಿದರು. ಅಧ್ಯಕ್ಷರು ಉತ್ತಮ ರೀತಿಯಲ್ಲಿ ಬಳ್ಳಮಂಜ ಬ್ರಹ್ಮಕಲಶ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಈವರೆಗೆ ದೇಣಿಗೆ ನೀಡಿದ ದಾನಿಗಳ ಹೆಸರು ಖರ್ಚು ವೆಚ್ಚಗಳ ಮಾಹಿತಿಯನ್ನು ನೀಡಲಾಯಿತು. ಕ್ಷೇತ್ರದ ಸಿಬ್ಬಂದಿಗಳಾದ ಬಾಲಕೃಷ್ಣ ಬಿ ಸ್ವಾಗತಿಸಿ ಸುಧೀರ್ ಶೆಟ್ಟಿ ಕೋರಬೆಟ್ಟು ಧನ್ಯವಾದ ಕೋರಿದರು.

LEAVE A REPLY

Please enter your comment!
Please enter your name here