ಸುದ್ದಿಯ ಯೂಟ್ಯೂಬ್-ಇನ್ಸ್ಟಾಗ್ರಾಂ-ಫೇಸ್‌ಬುಕ್ ಪೇಜ್‌ಗಳಿಗೆ ಅದ್ಭುತ ಸ್ಪಂದನೆ: ಒಂದೊಂದು ವೀಡಿಯೋಗೆ 3 ಲಕ್ಷಕ್ಕೂ ಅಧಿಕ ವೀಕ್ಷಕರು

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದ ನಂಬ‌ರ್ ವನ್ ಪತ್ರಿಕೆಯಾಗಿರುವ ಸುದ್ದಿ ಬಿಡುಗಡೆ ಇದೀಗ ಮುದ್ರಣ ಮಾತ್ರವಲ್ಲದೆ ಡಿಜಿಟಲ್ ಮಾಧ್ಯಮದಲ್ಲಿಯೂ ಸಾಧನೆ ಮಾಡುತ್ತಿದೆ. ಕಳೆದ 5 ವರ್ಷಗಳಿಂದ ಸುದ್ದಿ ನ್ಯೂಸ್ ಯೂ ಟ್ಯೂಬ್ ಚಾನೆಲ್ ವಿಶೇಷ ವರದಿ ಮತ್ತು ನೇರ ಪ್ರಸಾರ ಮಾಡುವ ಮೂಲಕ ನಿರೀಕ್ಷೆ ಮೀರಿ ಜನಮನ್ನಣೆ ಪಡೆಯುತ್ತಿದೆ.

ಉತ್ತಮ ಗುಣಮಟ್ಟದ ಛಾಯಾಗ್ರಹಣ, ಸಂಕಲನ ಹಾಗೂ ನಿರೂಪಕರ ವರದಿ ವಿಶ್ಲೇಷಣೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಇದೀಗ ಸುದ್ದಿ ಮಾಧ್ಯಮ ಯೂಟ್ಯೂಬ್ ಮಾತ್ರವಲ್ಲದೆ ಫೇಸ್‌ಬುಕ್, ಇನ್ಸ್ಟಾಗ್ರಾಂ ಪೇಜ್ ಗಳಲ್ಲಿಯೂ ಅತ್ಯಧಿಕ ವೀಕ್ಷಣೆ ಪಡೆಯುವ ಮೂಲಕ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಗುರುವಾಯನಕೆರೆಯ ಬ್ರೆಡ್ ಬೊಟಿಕ್ ಬಗ್ಗೆ ಮಾಡಿದ ರೀಲ್ಸ್ 3.62 ಲಕ್ಷ, ಫೇಸ್‌ಬುಕ್‌ನಲ್ಲಿ 2.14 ಲಕ್ಷ, ಗೇರುಕಟ್ಟೆ ಸಮೀಪದ ಸಂಭೋಳ್ಯದ ಸುಮಂತ್ ಕೊಲೆ ಪ್ರಕರಣದ ಒಂದೊಂದು ವೀಡಿಯೋ ಕೂಡ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಈ ಮೂಲಕ ಮುದ್ರಣದ ಜತೆಗೆ ದೃಶ್ಯ ಮಾಧ್ಯಮದಲ್ಲಿಯೂ ಸುದ್ದಿ ಬಿಡುಗಡೆ ಮುಂಚೂಣಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here