ಬೆಳಾಲು: ಗ್ರಾ.ಪಂ. ಮತ್ತು ಸಂಜೀವಿನಿ ಒಕ್ಕೂಟದಿಂದ ಸ್ವಚ್ಛತಾ ಕಾರ್ಯಕ್ರಮ

0

ಬೆಳಾಲು: ಗ್ರಾಮ ಪಂಚಾಯತ್ ಬೆಳಾಲು ಹಾಗೂ ಸಂಜೀವಿನಿ ಒಕ್ಕೂಟ ಬೆಳಾಲು ಇದರ ಸಹಯೋಗದಲ್ಲಿ ಬೆಳಾಲು ಗ್ರಾಮದ ಕೂಡಲ್ ಕೆರೆ ಎಂಬಲ್ಲಿನ ಮುಖ್ಯರಸ್ತೆಯ ಇಕ್ಕೆಲದಲ್ಲಿದ್ದ ಕಸ ಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಜ. 28ರಂದು ಮಾಡಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಪಂಚಾಯತ್ ಸಿಬ್ಬಂದಿಗಳಾದ ಪೂರ್ಣಿಮಾ, ಡೀಕಯ್ಯ,ಭುವನೇಶ್,ಶ್ರೇಷ್ಠ, ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾರದಾ, ಕಾರ್ಯದರ್ಶಿ ಉಮಾದೇವಿ, ಪದಾಧಿಕಾರಿ ಪ್ರೇಮ, ಎಂ.ಬಿ.ಕೆ ಹರಿಣಾಕ್ಷಿ, ಎಲ್. ಸಿ. ಆರ್. ಪಿ ಸರಸ್ವತಿ, ಕೃಷಿ ಸಖಿ ಸ್ವಾತಿ, ಸ್ವಚ್ಛ ಘಟಕ ದ ಸಿಬ್ಬಂದಿಗಳಾದ ಸುಂದರಿ ಮಾಯಾ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಯಿತು. ನಾಗರಿಕರು ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ ಬಿಸಾಡದೆ ಸ್ವಚ್ಛತೆಯ ಬಗ್ಗೆ ಜಾಗೃತರಾಗಿರಬೇಕೆನ್ನುವ ಸಂದೇಶವನ್ನು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.

LEAVE A REPLY

Please enter your comment!
Please enter your name here