






ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಮಾ.3ರಿಂದ 11ರವರೆಗೆ ನಡೆಯಲಿರುವ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ, ವಿಜಯಗೋಪುರ ಉದ್ಘಾಟನೆ, ಬ್ರಹ್ಮರಥ ಸಮರ್ಪಣೆ ಹಾಗೂ ಪುಷ್ಪರಥ ಸಮರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಜ.29ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಬಿಡುಗಡೆಗೊಳಿಸಿ, ಬ್ರಹ್ಮಕಲಶ ಅಂದರೆ ನಮಗೆಲ್ಲ ಹಬ್ಬ ಇದ್ದಂತೆ. ಗೋಪುರ ನಿರ್ಮಾಣ ಶಿಲಾನ್ಯಾಸ ಸಂದರ್ಭದಲ್ಲಿ 10ತಿಂಗಳಲ್ಲಿ ಗೋಪುರ ನಿರ್ಮಾಣ ಸಾಧ್ಯನಾ ಎಂದುಕೊಂಡಿದ್ದೆ. ಕೆಲಸ ಪೂರ್ಣ ಹಂತದಲ್ಲಿದೆ.ಇಲ್ಲಿ ನನ್ನ ಪೂಜ್ಯರು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಉಜಿರೆ ಇಡೀ ಪ್ರಪಂಚ ನೋಡುವಂತಾಗಿದೆ ಎಂದರು.

ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ, ವಿಜಯ ಗೋಪುರ ನಿರ್ಮಾಣ ಸಮಿತಿಯ ನೇತೃತ್ವ ವಹಿಸಿರುವ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಉಜಿರೆ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶಚಂದ್ರ ಸುರ್ಯಾಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಉಜಿರೆ ಲಕ್ಷ್ಮೀ ಇಂಡಸ್ಟ್ರಿಯ ಮೋಹನ್ ಕುಮಾರ್, ಶಿವರಾಮ ಪಡುವೆಟ್ನಾಯ, ಅನಂತಕೃಷ್ಣ ಮೂಡನ್ನಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಉಪಸ್ಥಿತರಿದ್ದರು.



ಬ್ರಹ್ಮಕಲಶ ಕೂಪನ್ ಶಶಿಧರ್ ಶೆಟ್ಟಿ ಬರೋಡ, ಬ್ರಹ್ಮಕಲಶ ಸ್ಟಿಕ್ಕರ್ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಶಿಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.









