ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಾ.ವೀಣಾ ಬನ್ನಂಜೆರವರಿಂದ 5ನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ: ರಂಗಪೂಜೆ-ಜ. 29 ಬೃಹತ್ ವಿಷ್ಣು ನಾಮಸ್ಮರಣೆ

0

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.23ರಂದು ಪ್ರಾರಂಭಗೊಂಡು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ ಐದನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯು ಜ. 27ರಂದು ಜರುಗಿತು. ಡಾ. ಪ್ರದೀಪ್ ನಾವೂರು ಇವರ ಮಾರ್ಗದರ್ಶನದಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವು ನಡೆಯಿತು. ಗಣ್ಯರಿಂದ ದೀಪ ಪ್ರಜ್ವಲನೆಗೊಂಡ ಬಳಿಕ ಡಾ| ವೀಣಾ ಬನ್ನಂಜೆರವರು ತನ್ನ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು.

ಬಳಿಕ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ವೇದಾವತಿ, ರಜನಿ ತನಿಯಪ್ಪ, ಲತಾ ಜನಾರ್ಧನ, ಶಾಮಲಾ ನಾರಾಯಣ, ಸುನಿತಾ ದಿನೇಶ್, ವೇದಾವತಿ ಸಂತೋಷ್, ಅವರ ಕೈಗೆ ಹಸ್ತಾಂತರಿಸಿದರು. ರಂಗ ಪೂಜೆ ನಡೆದ ಬಳಿಕ ಕ್ಷೇತ್ರಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡಿದರು.

ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್‌ ಎ.ಸ್ವಾಗತಿಸಿ, ವಂದಿಸಿದರು. ನಂತರ ಶ್ರೀ ದೇವರಿಗೆ ರಂಗ ಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಸೌಮ್ಯ ಲತಾ ಜಯಾನಂದ ಗೌಡ ಗುರಿಪಳ್ಳ, ಆರ್ ಟಿ ಓ ಅಧಿಕಾರಿ ಚಾರನ್, ಬೆಳ್ತಂಗಡಿ ಗುರುದೇವ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ಟ್ರಸ್ಟ್ ಉಪಾಧ್ಯಕ್ಷ ತನುಜಾ ಶೇಖರ್, ಪ್ರ. ಸಂಚಾಲಕ ಮೋಹನ್ ಬಂಗೇರ ಕಾರಿಂಜ, ಸುದ್ದಿ ಬಿಡುಗಡೆ ವರದಿಗಾರ ನಿಶಾನ್ ಬಂಗೇರ, ಸುದ್ದಿ ಬಿಡುಗಡೆ ಬೆಳ್ತಂಗಡಿ ವರದಿಗಾರ ಸುವಿರ್ ಜೈನ್, ಆರ್ಥಿಕ ಸಾಕ್ಷರತೆ ಇಲಾಖೆ ಅಧಿಕಾರಿ ಉಷಾ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ ಭಟ್, ಕಾರ್ಯಾಧ್ಯಕ್ಷ ಸೋನಿಯಾ ಯಶೋವರ್ಮ, ಶ್ರೀ ಗೋಪಾಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಲ | ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಬೆನಕ ಹಾಸ್ಪಿಟಲ್ ಉಜಿರೆ ಡಾ. ಶ್ಯಾಮಲ, ಒಕ್ಕಲಿಗ ಸಂಘದ ಶ್ರೀನಾಥ್ ಕೆ ಎಂ, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನಲ್ಕೆ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ಪ್ರದೀಪ ಗೌಡ ನಗಾಜೆ, ಗಣೇಶ್ ಗೌಡ ನಾವೂರು, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಬೃಹತ್ ವಿಷ್ಣು ನಾಮಸ್ಮರಣೆ: ಜ. 29ರಂದು ಸಂಜೆ 4.30ಕ್ಕೆ 2000ಕ್ಕೂ ಅಧಿಕ ಭಕ್ತರು ಏಕಕಾಲದಲ್ಲಿ ಕೃಷ್ಣ ನಾಮಸ್ಮರಣೆಯ ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಸಲಿದ್ದಾರೆ. ಇದರ ಉದ್ಘಾಟನೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡಲಿದ್ದು, ಹೇಮಾವತಿ ವೀ. ಹೆಗ್ಗಡೆಯವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ವಹಿಸಲಿದ್ದಾರೆ.

ನಾವೂರು ಜಾತ್ರೆ-ದಶಮಾನೋತ್ಸವ ಹಿನ್ನೆಲೆ ವಿಶೇಷ ಕಾರ್ಯಕ್ರಮ: ಜ.30ರ ಬೆಳಗ್ಗೆ 5.30ರಿಂದ ಭಕ್ತಾದಿಗಳಿಂದ ಸಾಮೂಹಿಕ ತುಳಸಿನಾಮಾರ್ಚನೆ, 9.30ಕ್ಕೆ ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಸಂಜೆ 6.30ರಿಂದ ಶ್ರೀಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಸಮಾರೋಪ, ರಂಗಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಜ. 31 ಬೆಳಗ್ಗೆ 7ರಿಂದ ದೇವರಿಗೆ ಪ್ರತಿಷ್ಠ ವರ್ಧಂತ್ಯುತ್ಸವ, 9.30ಕ್ಕೆ ಕೈಕಂಬ ಪೇಟೆ ಬಳಿಯಿಂದ ಇಂದಬೆಟ್ಟು, ನಾವೂರು, ನಡ ಕನ್ಯಾಡಿ ಗ್ರಾಮಸ್ಥರಿಂದ ಹಸಿರುವಾಣಿ ಹೊರಕಾಣಿಕೆ ಸಮರ್ಪಣೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ. ಸಂಜೆ 6ರಿಂದ ಕಮ್ಮಟ ಭಜನೋತ್ಸವ, ದೇವರಿಗೆ ಅಷ್ಟಾವಧಾನ ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 1ಸಂಜೆ ದುರ್ಗಾಪೂಜೆ, ರಂಗಪೂಜೆ, ರಾತ್ರಿ ಗಂಟೆ 7 ಧಾರ್ಮಿಕ ಸಭೆ, ಅನ್ನಸಂತರ್ಪಣೆ ರಾತ್ರಿ 9ಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದ್ರೆ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

ಶಶಿಧರ್ ಶೆಟ್ಟಿ ಬರೋಡ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ಮಣ್ಣಿನ ಮಡಿಕೆಯಲ್ಲಿ ಚಿತ್ರಗಳನ್ನು ಬಿಡಿಸಿ ಅದನ್ನು ನಗರ ಅಲಂಕಾರಕ್ಕೆ ಮತ್ತು ದೇವಸ್ಥಾನದ ಸುತ್ತ ಬಳಸಲಾಗಿದೆ. ಸಾರ್ವಜನಿಕರಿಗೆ ಜಾತ್ರೆಯಲ್ಲಿ ಮನೋರಂಜನೆಗೆ ಬೇಕಾದ ತೊಟ್ಟಿಲು ಹಾಗೂ ಇನ್ನಿತರ ಆಟಕ್ಕೆ ಬೇಕಾದ ಸಾಮಗ್ರಿಗಳನ್ನು ಕಲ್ಪಿಸಲಾಗಿದೆ. ರಾಷ್ಟ್ರೀಯ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಮಣ್ಯ ಭಟ್, ಕೆಎಂಸಿ ವೈದ್ಯ ಡಾ. ಚಕ್ರಪಾಣಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶಸ್ತ್ರಚಿಕಿತ್ಸಾ ತಜ್ಞ ಡಾ.ಈಶ್ವರ ಕೀರ್ತಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪೂರನ್ ವರ್ಮ, ಉದ್ಯಮಿ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಡಿ.ಪುಷ್ಪಗಿರಿ ಉಪಸ್ಥಿತರಿರಲಿದ್ದಾರೆ.

LEAVE A REPLY

Please enter your comment!
Please enter your name here