







ಅಳದಂಗಡಿ: ಸರಕಾರಿ ಪ್ರೌಢ ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರೌಢಶಾಲೆಯಿಂದ ದೇವಸ್ಥಾನದವರೆಗೆ ಪರಿಸರ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಸದಾಶಿವ ಪೂಜಾರಿ, ಮುಖ್ಯ ಶಿಕ್ಷಕಿ ಶಾಂತಿ ಮರಿಯ ಸಲ್ದಾನ್ಹ ಮತ್ತು ಸಹ ಶಿಕ್ಷಕರು ಪಾಲ್ಗೊಂಡರು.


ಗ್ರಾಮ ಪಂಚಾಯಿತಿ ಅಳದಂಗಡಿಯ ಅಧ್ಯಕ್ಷರು 100 ಜೊತೆ ಗ್ಲೌಸ್ ನೀಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಕರಿಸಿದರು. ಪರಿಸರ ಸ್ವಚ್ಛತೆಯನ್ನು ಮಾಡಿದಂತಹ ವಿದ್ಯಾರ್ಥಿಗಳಿಗೆ ಪಾನೀಯ ಮತ್ತು ತಿಂಡಿಯ ವ್ಯವಸ್ಥೆಯನ್ನು ಗಣ್ಯರಾದ ಮೋಹಿನಿ, ರೇಖಾ, ಸುಬ್ರಹ್ಮಣ್ಯ, ಅಭಿಷೇಕ್, ಹೆಚ್‌ಪಿ ಪೆಟ್ರೋಲ್ ಪಂಪಿನ ಮಾಲಕರಾದ ಕವಿತಾ ಮತ್ತು ಸುಕೇಶ್, ದಿನೇಶ್ ಪೂಜಾರಿ, ಸದಾಶಿವ ಪೂಜಾರಿ ಅವರು ಒದಗಿಸಿ ಸಹಕರಿಸಿದರು.

ಶಾಲೆಯ ಎಸ್‌ಡಿಎಂಸಿ ಸಮಿತಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪ್ರೌಢ ಶಾಲೆ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಂದ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಲಾಯಿತು.









