ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ಎ.ಎಸ್.ಐ ಬಾಲಕೃಷ್ಣ ಡಿ. ರಿಂದ ಮಾಹಿತಿ ಕಾರ್ಯಾಗಾರ

0

ಅರಸಿನಮಕ್ಕಿ: ಜ. 24 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8, 9ಮತ್ತು10ನೇ ತರಗತಿಯ ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಎ.ಎಸ್.ಐ ಬಾಲಕೃಷ್ಣ.ಡಿ ಅವರಿಂದ ಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಬಾಲಾಪರಾಧ ಹಾಗೂ ಸೆಕ್ಷನ್ 6, 10, 12 ,14 , 21ರ ಕುರಿತು ಮಾಹಿತಿ ನೀಡಿದರು.

ಹದಿನೆಂಟು ವರ್ಷದ ಒಳಗಿನ ಡಿ.ಎಲ್ ರಹಿತ ಮಕ್ಕಳು ವಾಹನ ಚಾಲನೆ ಮಾಡಿದರೆ ಸಂಚಾರ ಆರಕ್ಷಕರು ಕೈಗೊಳ್ಳುವ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶದ ಕುರಿತು ಮತ್ತು ಫೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು . ಹೆಣ್ಣು ಭ್ರೂಣ ಹತ್ಯೆ ಅಥವಾ ಶಿಶು ಹತ್ಯೆಗೆ ನೀಡುವ ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು.

ಮಾದಕ ವಸ್ತುಗಳ ಸೇವನೆಯಿಂದ ಆಗುವ ಆರೋಗ್ಯ ಹಾನಿ ಹಾಗೂ ಸೇವನೆಗೆ ಇರುವ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಅರಸಿನಮಕ್ಕಿ ಸದಸ್ಯರಾದ ಅವಿನಾಶ್ ಭಿಡೆ ಮತ್ತು ರಮೇಶ್ ಭೈರಕಟ್ಟ ಶಾಲಾ ಮುಖ್ಯ ಗುರುಗಳು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here