






ಬೆಳ್ತಂಗಡಿ: ದಾವಣಗೆರೆ ನಿವಾಸಿಯ ಮೃತದೇಹ ಪತ್ತೆಯಾದ ಘಟನೆ ರೆಖ್ಯದಲ್ಲಿ ನಡೆದಿದ್ದು ವಾರಿಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೆಲ್ಯಡ್ಕದಲ್ಲಿ ಜ.26 ರಂದು ಸುಮಾರು 40ರಿಂದ 45ರೊಳಗಿನ ವಯಸ್ಸಿನವರಾಗಿರುವ ದಾವಣಗೆರೆ ನಿವಾಸಿ ಹನುಮಂತಪ್ಪ ಎಂಬವರ ಮೃತದೇಹ ಅಸೌಖ್ಯದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮಸ್ಥಳ ಠಾಣಾ ಪೊಲೀಸರು ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಸುಮಾರು 5.8 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈ ಬಣ್ಣ ,ಮುಖದಲ್ಲಿ ಕಪ್ಪು ಗಡ್ಡ-ಮೀಸೆ, ತಲೆಯಲ್ಲಿ ಕಪ್ಪು ಕೂದಲು, ಹೊಟ್ಟೆಯ ಎಡಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಹಾಗೂ ಎದೆಯ ಎಡಭಾಗದಲ್ಲಿ ಕಪ್ಪು ಗುಳ್ಳೆಯಂತಿರುವ ಕಪ್ಪು ಮಚ್ಚೆ ಗುರುತುಗಳಿವೆ. ಮೃತದೇಹದ ಮೈಮೇಲೆ ನೇರಳೆ ಬಣ್ಣದ ಉದ್ದ ತೋಳಿನ ಶರ್ಟ್ ,ಕಪ್ಪು ಒಳಚಡ್ಡಿ, ನೀಲಿ ಬಣ್ಣದ ಕೆಂಪು ಚೌಕುಳಿಗಳಿರುವ ಲುಂಗಿ ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.









