ಎಸ್.ಡಿ.ಎಂ ಕಾಲೇಜು: ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕಾಲೇಜಿನ 7 ವಿದ್ಯಾರ್ಥಿಗಳು ಆಯ್ಕೆ-ಗಾರ್ಡ್ ಆಫ್ ಆನರ್ ಮತ್ತು ಪಿಎಂ ರಾಲಿಯಲ್ಲಿ ಪಾಲ್ಗೊಳ್ಳುವಿಕೆ-ದೆಹಲಿಯಲ್ಲಿ ನಡೆಯಲಿರುವ 77ನೇ ಗಣರಾಜ್ಯೋತ್ಸವ ಪಥಸಂಚಲನ-ಎಸ್.ಡಿ.ಎಂ ಸಂಸ್ಥೆಯಿಂದ ಅತೀ ಹೆಚ್ಚು ಕೆಡೆಟ್ ಗಳು ಆಯ್ಕೆ

0

ಉಜಿರೆ: ದೆಹಲಿಯ ಕೆಂಪುಕೋಟೆಯಲ್ಲಿ ಇದೇ ಜನವರಿ 26ರಂದು ನಡೆಯಲಿರುವ 77 ನೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಎನ್.ಸಿ.ಸಿ ವಿಭಾಗದ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷವೂ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಆರ್.ಡಿ ಪರೇಡ್ ನಲ್ಲಿ ಭಾಗವಹಿಸುತ್ತಿದ್ದು, 2026 ರನೇ ಸಾಲಿನ ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೊದಲ ಬಾರಿಗೆ ಎಸ್.ಡಿ.ಎಂ ಒಂದೇ ಸಂಸ್ಥೆಯಿಂದ ಆರ್ಮಿ ವಿಭಾಗದ 4 ಕೆಡೆಟ್ ಗಳು ಹಾಗು ನೇವಿ ವಿಭಾಗದ 3 ಕೆಡೆಟ್ ಗಳು ಒಟ್ಟು 7 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿಗಳಿಗೆ ಕಾಲೇಜಿನ ಆರ್ಮಿ ಎನ್‌.ಸಿ.ಸಿ ಘಟಕದ ಎ.ಎನ್.ಓ. ಡಾ. ಭಾನುಪ್ರಕಾಶ್ ಬಿ.ಇ., ನೇವಿ ಎನ್‌.ಸಿ.ಸಿ ಘಟಕದ ಸಿ.ಟಿ.ಓ ಶ್ರೀ ಹರೀಶ್ ಶೆಟ್ಟಿ, ಹಾಗೂ ಕಾಲೇಜಿನ ಆರ್ಮಿ ಮತ್ತು ನೇವಿ ವಿಭಾಗದ ಹಿರಿಯ ಕ್ಯಾಡೆಟ್‌ಗಳ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಿದ್ದಾರೆ. ಜೊತೆಗೆ 18 ಕರ್ನಾಟಕ ಬ್ಯಾಟಲಿಯನ್ ಆರ್ಮಿ ಮತ್ತು 5 ಕರ್ನಾಟಕ ನೇವಿ ಅಧಿಕಾರಿಗಳು ಈ ಸಾಧನೆಗೆ ನಿರಂತರ ಪ್ರೋತ್ಸಾಹ ನೀಡಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಕಾಲೇಜಿನ ಆರ್ಮಿ ಎನ್‌.ಸಿ.ಸಿ ಘಟಕದ ಎ.ಎನ್.ಓ. ಡಾ. ಭಾನುಪ್ರಕಾಶ್ ಬಿ.ಇ., ನೇವಿ ಘಟಕದ ಸಿ.ಟಿ.ಓ ಹರೀಶ್ ಶೆಟ್ಟಿ, ಆರ್ಮಿ ಮತ್ತು ನೇವಿ ವಿಭಾಗದ ಹಿರಿಯ ಕ್ಯಾಡೆಟ್‌ಗಳ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

ಭಾಗವಹಿಸುತ್ತಿರುವ ಕೆಡೆಟ್‌ಗಳ ವಿವರ: ಆರ್ಮಿ ವಿಭಾಗದಿಂದ ಗಾರ್ಡ್ ಆಫ್ ಆನರ್‌ನಲ್ಲಿ ದೀಪ್ತಿ ಆಚಾರ್ಯ ಪಿ., ಪ್ರಧಾನಮಂತ್ರಿ ರಾಲಿಯಲ್ಲಿ ವಿಷ್ಣು ಎಸ್.ಕೆ., ಚಿರಂಜೀವಿ, ಪ್ರಥಮ್ ಕೆ.ಎಂ., ಹಾಗೂ ನೌಕಸೇನೆ ವಿಭಾಗದಿಂದ ಗಾರ್ಡ್ ಆಫ್ ಆನರ್ ಪಿಒ ಕ್ಯಾಡೆಟ್ ನಿಶ್ಚಿತ್ ಶೆಟ್ಟಿ ಬಿ.ಸಿ., ಗಾರ್ಡ್ ಆಫ್ ಆನರ್ ಲೀಡಿಂಗ್ ಕ್ಯಾಡೆಟ್ ಮೋಹನ್ ಬಿ.ಆರ್., ಕರ್ತವ್ಯ ಪಥದಲ್ಲಿ ಲೀಡಿಂಗ್ ಕ್ಯಾಡೆಟ್ ವರ್ಷಿಣಿ ಆರ್.ಟಿ. ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here