ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ನಡ ರೈತರು

0

ನಡ: ಪ್ರದೇಶದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಜ. 26ರಂದು ಯಶಸ್ವಿಯಾಗಿದೆ. ಚಿರತೆಯನ್ನು ಹಿಡಿಯಲು ವಿಶೇಷ ತಂಡ ರಚಿಸಿ ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ ತಾಲೂಕಿನ ಅನೇಕ ಸ್ಥಳದಲ್ಲಿ ವಿಶೇಷ ಬೋನ್ ಇಡಲಾಗಿತ್ತು, ಈಗ ಚಿರತೆ ಸೆರೆಯಾಗಿದೆ.

ಒಂದು ತಿಂಗಳಿನಿಂದ ಕಾಡಿನಿಂದ ನಗರದ ಪ್ರದೇಶಕ್ಕೆ ಬಂದು ಓಡಾಡುತ್ತಿರುವ ಚಿರತೆ ಸಾರ್ವಜನಿಕರಿಗಷ್ಟೇ ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯ ನಿದ್ದೆಯನ್ನೂ ಕೆಡಿಸಿದೆ. ಕಳೆದ ಮೂರು ವಾರದಿಂದ ವಿಶೇಷ ಕಾರ್ಯಾಚರಣೆ ಪಡೆ ಅದರ ಸೆರೆಗೆ ಹರಸಾಹಸ ಪಡುತ್ತಿತ್ತು.

ನಡ ಗ್ರಾಮದ ಕನ್ಯಾಡಿ ಪರಿಸರದ ರಸ್ತೆ ಹಾಗೂ ಕುರುಚಲು ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಚಿರತೆ. ಈ ಪ್ರದೇಶದ ಬಳಿ ಚಿರತೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದು, ಅರಣ್ಯ ಇಲಾಖೆಗೆ ರವಾನಿಸಿದ್ದರು. ಮತ್ತು ಓರ್ವರ ಮೇಲೆ ದಾಳಿಯೂ ನಡೆಸಿತ್ತು.

ನಡ ಗ್ರಾಮದ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು, ಹಗಲಿನ ವೇಳೆಯೂ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದರು ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ, ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇಟ್ಟು ಸೆರೆಗೆ ಯೋಜನೆ ರೂಪಿಸಿದರು.

ಸುತ್ತಮುತ್ತ ಚಿರತೆ ಹಾವಳಿ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯ ವಿಶೇಷ ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ವಿಶೇಷ ತಂಡ ರಚಿಸಿ ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ ಅನೇಕ ಸ್ಥಳದಲ್ಲಿ ವಿಶೇಷ ಬೋನ್ ಇಡಲಾಗಿತ್ತು. ಕನ್ಯಾಡಿ ಕಯ್ಯಾಂಗ್ ಕೊಡಪಟ್ಯ ಮಂಜಪ್ಪ ನಾಯ್ಕ ಎಂಬುವವರ ಮನೆಯ ಬಳಿ ಚಿರತೆ ಕಾರ್ಯಾಚರಣೆ ಯಶಸ್ವಿ, ಕೊನೆಗೂ ಬೋನಿಗೆ ಬಿದ್ದ ಚಿರತೆ, ಇದೀಗ ಒಂದು ಬೋನಿನಲ್ಲಿ ಜ.26ರಂದು ಮುಂಜಾನೆ ನರಹಂತಕ ಚಿರತೆ ಸೆರೆಯಾಗಿದ್ದು, ಸ್ಥಳೀಯ ರೈತರು ನಿಟ್ಟುಸಿರು ಬಿಡುವಂತಾಗಿದೆ.

LEAVE A REPLY

Please enter your comment!
Please enter your name here