






ನಡ: 1925ರಲ್ಲಿ ನಡಗುತ್ತು ದಿ| ಚಂದ್ರಯ್ಯ ಅಜ್ರಿಯವರಿಂದ ಆರಂಭಗೊಂಡು ಶತಮಾನೋತ್ಸವ ಸಂಭ್ರಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡದ ಶತಮಾನೋತ್ಸವದ ಸಂಭ್ರಮ ಕಾರ್ಯಕ್ರಮ ಜ.25ರಂದು ನಡೆಯಿತು.

ಶತಮಾನೋತ್ಸವ ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್ ಪ್ರಸ್ತಾವಿಕ ಮಾತನಾಡಿದರು. ಬೆಳಿಗ್ಗೆ ಹಿರಿಯ ವಿದ್ಯಾರ್ಥಿ ಡಾ. ಸತೀಶ್ಚಂದ್ರರಿಂದ ಆಕರ್ಷಕ ಮೆರವಣಿಗೆ ಉದ್ಘಾಟನೆಗೊಂಡಿತು.

ಸ್ವಾಗತ ದ್ವಾರದ ಉದ್ಘಾಟನೆಯನ್ನು ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ನೆರವೇರಿಸಿದರು. ಶತಮಾನೋತ್ಸವದ ಶಾಶ್ವತ ಕೊಡುಗೆಯಾದ ರಂಗ ಮಂದಿರದ ಲೋಕಾರ್ಪಣೆಯು, ಶಾಲೆಗೆ ವಿಶೇಷ ಕೊಡುಗೆ ನೀಡಿದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ ತುಳುಕೂಟ ಅಧ್ಯಕ್ಷರಿಂದ ಲೋಕಾರ್ಪಣೆಗೊಂಡಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯಕ್ ವಹಿಸಿದ್ದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗುರುವಂದನೆ, ಮತ್ತು ವಿದ್ಯಾಭ್ಯಾಸ ಮಾಡಿದ 70 ವರ್ಷ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.



ರಾತ್ರಿ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ತಂಡದಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ ಒಂತೆ ಲೇಟಾಂಡ್ ಆಂಡಲ.. ಪ್ರದರ್ಶನಗೊಳ್ಳಲಿದೆ ಶತಮಾನೋತ್ಸವ ಸಭಾ ಕಾರ್ಯಕ್ರಮವನ್ನು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ವ್ಯಕ್ತಿ ಕಾಲ ಮೇಲೆ ನಿಂತು ಕುಟುಂಬ ಜೀವನವನ್ನು ಮುಂದಕ್ಕೆ ನಡೆಸಲು ಇರುವ ಆಧಾರ ವಿದ್ಯೆ. ನಮ್ಮ ಜೊತೆನೆ ಇರುವ ಮತ್ತು ಯಾರು ಕಳ್ಳತನ ಮಾಡದ ಸಂಪತ್ತು ವಿದ್ಯೆ. ಗ್ರಾಮದ ಹಬ್ಬವಾಗಿ ಊರವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜಿ, ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್, ಜಮಾಲಾಬಾದ್ ಮಸೀದಿ ಧರ್ಮ ಗುರು ಮೌಲಾನಾ ಸೈಯದ್ ಹಕೀಲ್ ಶಾ, ಮಂಜೊಟ್ಟಿ ಚರ್ಚ್ ಧರ್ಮಗುರು ಫಾ| ಪಾವ್ ಸೆಬಾಸ್ಟಿಯನ್ ಡಿ.ಸೋಜ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ ಅಜಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಅಲೋಶಿಯಸ್ ಲೋಬೋ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧರ ಭಾಗವಹಿಸಿದ್ದರು.

ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುನಿರಾಜ ಅಜ್ರಿ, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ, ಕೋಶಾಧಿಕಾರಿ ಸಯ್ಯಾದ್ ಹಬೀಬ್ ಸಾಹೇಬ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ನಾಯ್ಕ, ವಿದ್ಯಾರ್ಥಿ ನಾಯಕ ಚಿರಾಗ್ ಉಪಸ್ಥಿತರಿದ್ದರು.

ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕರನ್ನು ಗೌರವಿಸಲಾಯಿತು. 75 ವರ್ಷ ಮೀರಿದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ದಾ ಸ್ವಾಗತಿಸಿ, ಯತೀಶ್ ಕಾರ್ಯಕ್ರಮ ನಿರೂಪಿಸಿ, ಬಿ.ಮುನಿರಾಜ ಅಜ್ರಿ ವಂದಿಸಿದರು..









