






ಉರುವಾಲು: ಪದವು ಸರ್ಕಲ್ ವತಿಯಿಂದ ಇಸಾಬ ಹಾಗೂ ಮಾದರಿ ಮದುವೆ ಕ್ಯಾಂಪ್ ಜ. 23ರಂದು ಸರ್ಕಲ್ ಅಧ್ಯಕ್ಷ ರಫೀಕ್ ಝೈನಿಯವರ ಅಧ್ಯಕ್ಷ ತೆಯಲ್ಲಿ ಉರುವಾಲು ಮಸೀದಿ ಹಾಲ್ ನಲ್ಲಿ ಜರಗಿತು.
ಎಸ್. ವೈ. ಎಸ್ ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ಮಾದರಿ ಮದುವೆ 100 ದಿನದ ಅಭಿಯಾನದ ಅಂಗವಾಗಿ ಉರುವಾಲು ಪದವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರು ಮುಖ್ಯ ಪ್ರಭಾಷಣ ನಡೆಸಿ, ಇಸ್ಲಾಮಿನಲ್ಲಿ ಇತ್ತೀಚಿನ ದಿನಗಳಲ್ಲಿ ಅನಗತ್ಯ ದುಂದುವೆಚ್ಚದ ಮದುವೆಗಳನ್ನು ನಡೆಸುವುದು ಇಸ್ಲಾಮಿನಲ್ಲಿ ಇಲ್ಲದ ಅನಿಸ್ಲಾಮಿಕ ತಾಳಮೇಳದಂತಹ ಅನಾಚಾರಗಳನ್ನು ನಡೆಸಿ ಸಾಲ ಮೂಲಗಳನ್ನು ಮಾಡಿ ಆಡಂಬರದ ಮದುವೆ ನಡೆಸಿ ಜೀವನ ಪರ್ಯಂತ ಸಾಲ ತೀರಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಇಂತಹ ಅನಾಚಾರಗಳನ್ನು ತೊರೆದು ಪ್ರವಾದಿ ಮುಹಮ್ಮದ್ ಪೈಗಂಬರ್ (ಸ ಅ) ತೋರಿಸಿ ಕೊಟ್ಟ ಮಾದರಿ ಮದುವೆ ನಡೆಸಿ ಜೀವನದಲ್ಲಿ ಸಂತೋಷದ ದಾಂಪತ್ಯ ಜೀವನ ನಡೆಸಲು ವದು ವರರು, ಪೋಷಕರು ಧೃಡ ನಿರ್ಧಾರ ಕೈಗೊಳ್ಳಬೇಕು ಎಂದರು.



ಎಸ್. ವೈ. ಎಸ್ ಉಪ್ಪಿನಂಗಡಿ ಝೋನ್ ಕೋಶಾಧಿಕಾರಿ ಡಾ. ಫಾರೂಕ್ ರವರು ಮಾತನಾಡಿ ಸಾಂತ್ವನ ತಂಡದ ಟೀಂ ಇಸಾಬ ಕಾರ್ಯಕರ್ತರು ತಾನು ತನ್ನ ಗುಣ ನಡತೆಯನ್ನು ಉತ್ತಮಗೊಳಿಸುವುದರೊಂದಿಗೆ ಬಡ ನಿರ್ಗತಿಕ ವಿಧವಾ ಅನಾಥ ಮಕ್ಕಳ ಕಷ್ಟ ಕಾರ್ಪಣ್ಯಗಳನ್ನು ಗುರುತಿಸಿ ಜಾತಿ ಮತ ಬೇಧವಿಲ್ಲದೆ ಸಹಾಯ ಮಾಡಬೇಕು ಎಂದರು.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಯಾಕೂಬ್ ಮಾಪಾಲ್ ಕೆ. ಎಂ.ಜೆ., ಜಿಲ್ಲಾ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಯೂನಿಟ್ ಅಧ್ಯಕ್ಷ ಫಕೀರ್ ಸಾಹೇಬ್, ಸರ್ಕಲ್ ಕೋಶಾಧಿಕಾರಿ ಕಾಸಿಂ ಪೀರ್ಯ, ಎಸ್. ಎಸ್. ಎಫ್. ಡಿವಿಷನ್ ನಾಯಕ ಶಂಸುದ್ದೀನ್ ಹಿಮಮಿ, ಎಸ್. ವೈ. ಎಸ್ ಯೂನಿಟ್ ಅಧ್ಯಕ್ಷ ಸಿದ್ದಿಖ್ ಕೊರಿಂಜ, ಸರ್ಕಲ್ ಪ್ರ. ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಪದ್ಮುಂಜ, ಇಸಾಬ ಕಾರ್ಯದರ್ಶಿ ಇಬ್ರಾಹಿಂ, ಉಪಾಧ್ಯಕ್ಷ ಲೆತೀಫ್ ಹಾಗೂ ಜಮಾಅತ್ ಕೆ.ಎಂ.ಜೆ., ಎಸ್ ವೈ ಎಸ್., ಎಸ್. ಎಸ್. ಎಫ್. ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ದಅವಾ ಕಾರ್ಯದರ್ಶಿ ಮುಸ್ತಫಾ ಮದನಿಯವರು ಸ್ವಾಗತಿಸಿದರು. ಇಬ್ರಾಹಿಂ ಕನ್ಯಾರಕೋಡಿ ಧನ್ಯವಾದ ಸಲ್ಲಿಸಿದರು.









