ಕಾಜೂರಿಗೆ ಸಾರ್ವಜನಿಕ ಶೌಚಾಲಯ: ಪಂಚಾಯತ್‌ ನಿಂದ ಕ್ರಮ: ಮಿತ್ತಬಾಗಿಲು ಪಂಚಾಯತ್ ಆಡಳಿತ‌‌‌ ಮಂಡಳಿಗೆ ಗೌರವಾರ್ಪಣೆ

0

ಬೆಳ್ತಂಗಡಿ: ಲಕ್ಷಾಂತರ ಪ್ರವಾಸಿಗಳು ಆಗಮಿಸುತ್ತಿರುವ ಕಾಜೂರು ದರ್ಗಾ ಶರೀಫ್ ವಠಾರದಲ್ಲಿ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೌಚಾಲಯಗಲ್ಲನ್ನು‌ ನಿರ್ಮಿಸಿಕೊಡಲು ಕ್ರಮ ವಹಿಸಲಾಗಿದೆ ಎಂದು ಮಿತ್ತಬಾಗಿಲು ಗ್ರಾ.ಪಂ ಅಧ್ಯಕ್ಷ ವಿನಯಚಂದ್ರ ಸೇನೆರೆಬೆಟ್ಟು ಹೇಳಿದರು.

ಕಾಜೂರು‌‌ ಮಖಾಂ ಶರೀಫ್ ಉರೂಸ್ ಪ್ರಯುಕ್ತ ಕ್ಷೇತ್ರಕ್ಕೆ‌ಭೇಟಿ ಮಾಡಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪಂಚಾಯತ್ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಎಲ್ಲ‌ ಜನಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು.

ಸದಸ್ಯರುಗಳಾದ ಚಂದ್ರಶೇಖರ ಗೌಡ, ಶಾಹುಲ್ ಹಮೀದ್, ಅಹ್ಮದುಲ್ ಕಬೀರ್, ರಾಮಣ್ಣ, ಲತಾ, ಶಾಂಭವಿ, ಮೋಹಿನಿ, ಚೇತನಾ, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್, ಹಾಗೂ ಎಲ್ಲಾ ಸಿಬ್ಬಂದಿಗಳು, ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸನ್ಮಾನ‌‌ ನೆರವೇರಿಸಿದ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅವರು ಮಾತನಾಡಿ, ಉರೂಸ್‌ಸಂದರ್ಭ ಮಾತ್ರವಲ್ಲದೆ ಪಂಚಾಯತ್ ವತಿಯಿಂದ ಕಾಜೂರಿಗೆ ನಿರಂತರ ನೀರಿನ ವ್ಯವಸ್ಥೆ ಇತ್ಯಾದಿಯಾಗಿ ಸಹಕರಿಸುತ್ತಿರುವುದನ್ನು ಸ್ಮರಿಸಿದರು.

ಉರೂಸ್‌ಸಮಿತಿ ಉಪಾಧ್ಯಕ್ಷ ಅಬ್ದುಲ್‌ ಅಝಝ್ ಝುಹುರಿ, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಡಿ.ವೈ ಉಮರ್, ಜೊತೆ ಕಾರ್ಯದರ್ಶಿ ಅಶ್ರಫ್‌ ಕಿಲ್ಲೂರು, ಹಿರಿಯ ಸದಸ್ಯರುಗಳಾದ ಅಬೂಬಕ್ಕರ್ ಮಲ್ಲಿಗೆ ಮತ್ತು ಬದ್ರುದ್ದೀನ್ ಕಾಜೂರು, ಜಮಾಅತ್ ಉಪಾಧ್ಯಕ್ಷ ಬಶೀರ್ ಅಹ್‌ಸನಿ ಸಹಿತ ಉರೂಸ್ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here