ರಾಷ್ಟೀಯ ಹೆದ್ದಾರಿ ಉಜಿರೆ ಪೇಟೆಯಲ್ಲಿ ಸೇವಾ ರಸ್ತೆ ರದ್ದು ಮಾಡಿಸುವಂತೆ ವರ್ತಕರ ಸಂಘದಿಂದ ಡಾ. ಹೆಗ್ಗಡೆಯವರಿಗೆ ಮನವಿ

0

ಉಜಿರೆ: ರಾಷ್ಟ್ರೀಯ ಹೆದ್ದಾರಿಯ ಸೇವಾ ರಸ್ತೆಯಿಂದಾಗಿ ನಾವು ನಂಬಿಕೊಂಡಿರುವ ವ್ಯಾಪಾರಕ್ಕೆ ಸಮಸ್ಯೆಯಾಗುತ್ತದೆ, ಹೇಗಾದರು ಮಾಡಿ ಉಜಿರೆ ಹೆಚ್ ಪಿ ಪೆಟ್ರೋಲ್ ಪಂಪ್ ನಿಂದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ತನಕ ಸೇವಾರಸ್ತೆ ರದ್ದು ಮಾಡಿಸಿ ಎಂದು ಉಜಿರೆ ವರ್ತಕ ಸಂಘದ ವತಿಯಿಂದ ರಾಜ್ಯ ಸಭಾ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್.ರಮ್ಯಾ, ನಿಕಟಪೂರ್ವ ಅಧ್ಯಕ್ಷ ಅರವಿಂದ ಕಾರಂತ್, ಕೋಶಾಧಿಕಾರಿ ವಿಶ್ವನಾಥ ಭಂಡಾರಿ, ಉಪಾಧ್ಯಕ್ಷರಾದ ಹುಕುಂ ರಾಮ್ ಪಟೇಲ್, ಜಯಂತ್ ನಮನ್ ಬೇಕರಿ, ವಿಜಯ್ ತರಕಾರಿ ಇತರ ಹೆಚ್ಚಿನ ವರ್ತಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here