ಧರ್ಮಸ್ಥಳ: ಗೈಡ್ ಕ್ಯಾಪ್ಟನ್ ಗೀತಾರಿಗೆ ಗೌರವ

0

ಧರ್ಮಸ್ಥಳ: ಧರ್ಮಸ್ಥಳ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಗೀತಾ ಅವರು ಗೈಡ್ಸ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಪಚ್ಮಾರಿ ವತಿಯಿಂದ ನೀಡಲಾಗುವ ಪ್ರಮಾಣ ಪತ್ರ ಹಾಗೂ ಪಾರ್ಚ್ ಮೆಂಟ್ ಗೆ ಭಾಜನರಾಗಿದ್ದಾರೆ.

ಅವರು ಸಪ್ಟೆಂಬರ್ 24ರಿಂದ 30ರವರೆಗೆ ದೊಡ್ಡಬಳ್ಳಾಪುರದ ಆನಿಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ, ಗೈಡ್ ವಿಭಾಗದ ರಾಜ್ಯ ತರಬೇತಿ ಆಯುಕ್ತರಾದ ಶಾಮಲಾ ಕೆ.ವಿ ಅವರ ಶಿಬಿರ ನಾಯಕತ್ವದಲ್ಲಿ ತರಬೇತಿಯನ್ನು ಪಡೆದಿದ್ದರು.

LEAVE A REPLY

Please enter your comment!
Please enter your name here