ಜ.26ರಿಂದ ಬೆಳ್ತಂಗಡಿಯಿಂದ 4 ದಿನಗಳ ಸಿಐಟಿಯು ಕಾಲ್ನಡಿಗೆ ಜಾಥಾ ಪ್ರಾರಂಭ

0

ಬೆಳ್ತಂಗಡಿ: ಪ್ರಜೆಗಳ ಹಕ್ಕನ್ನು ಧಮನಿಸುವ ಧೋರಣೆ ಖಂಡಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರುತ್ತಾ ಕೇಂದ್ರ ಸರಕಾರ ಜಾರಿ ಮಾಡಿರುವ 4 ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಸಿಐಟಿಯು ಆ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ನಡೆಯುವ ಕಾಲ್ನಡಿಗೆ ಜಾಥಾ ಜ.26ರಂದು ಬೆಳ್ತಂಗಡಿಯಲ್ಲಿ ಉದ್ಘಾಟನೆಗೊಂಡು ಜ.29ರಂದು ಮಂಗಳೂರು ತಲುಪಲಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ನ್ಯಾಯವಾದಿ ಬಿ.ಎಂ. ಭಟ್ ತಿಳಿಸಿದ್ದಾರೆ.

ಹಲವಾರು ಹೋರಾಟ, ತ್ಯಾಗ-ಬಲಿದಾನಗಳಿಂದ ಪಡೆದ ಬೀಡಿ ಮತ್ತು ಸಿಗಾ‌ರ್ ಕಾಯ್ದೆ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಾಯ್ದೆ 1996, ಕೈಗಾರಿಕಾ ವಿವಾದಗಳ ಕಾಯ್ದೆ, ಗುತ್ತಿಗೆ ಪದ್ಧತಿ ನಿಯಂತ್ರಣ ಕಾಯ್ದೆ ಮೊದಲಾದ 29 ಕಾನೂನುಗಳನ್ನು ರದ್ದುಪಡಿಸಿ ಮಾಲಕರ ಪರವಾದ, ಕಾರ್ಪರೇಟ್ ಕಂಪೆನಿಗಳ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿದ ಕೇಂದ್ರ ಸರಕಾರ ತಕ್ಷಣ ಅದನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತ ಮುಷ್ಕರ ನಡೆಸಲಿವೆ. ಅದರ ಪ್ರಚಾರಾರ್ಥವಾಗಿ ಈ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದವರು ತಿಳಿಸಿದರು.

LEAVE A REPLY

Please enter your comment!
Please enter your name here