ಪದ್ಮುಂಜದಲ್ಲಿ ಎಸ್.ವೈ.ಎಸ್. ವತಿಯಿಂದ ವಾರ್ಷಿಕ ಅಜ್ಮೀರ್ ಮೌಲೀದ್-ಮದುವೆ ಮಾದರಿಯಾಗಿರಲಿ ಅನಗತ್ಯ ದುಂದುವೆಚ್ಚದಿಂದ ದೂರವಿರಿ: ಮುಹಮ್ಮದಲೀ ಸಖಾಫಿ ಅಸ್ಹರಿಯ

0

ಪದ್ಮುಂಜ: ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಕರ್ನಾಟಕ ಸುನ್ನೀ ಯುವಜನ ಸಂಘ ಎಸ್. ವೈ. ಎಸ್ ಪದ್ಮುಂಜ ಯೂನಿಟ್ ವತಿಯಿಂದ ವಾರ್ಷಿಕ ಅಜ್ಮೀರ್ ಮೌಲೀದ್ ಕಾರ್ಯಕ್ರಮ ಸಮಿತಿ ಅಧ್ಯಕ್ಷ ನಝೀರ್ ಮಲೆಂಗಲ್ ರವರ ಅಧ್ಯಕ್ಷತೆಯಲ್ಲಿ ಜ. 18ರಂದು ಜರಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷನ ನಡೆಸಿದ ಅಸ್ಹರಿಯ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಮುಹಮ್ಮದಲೀ ಸಖಾಫಿಯವರು ಇಸ್ಲಾಂ ಧರ್ಮದಲ್ಲಿ ಸರಳ ವಿವಾಹ ನಡೆಸಲು ಪ್ರವಾದಿ ಮುಹಮ್ಮದ್ (ಸ ಅ) ಅವರು ಪ್ರೋತ್ಸಾಹ ನೀಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳಾದ ನಾವು ಅನಗತ್ಯ ದುಂದುವೆಚ್ಚದ ಮದುವೆಗಳನ್ನು ಮಾಡುವುದು ಅನಿಸ್ಲಾಮಿಕವಾದಂತಹಾ ತಾಳ ಮೇಳಗಳನ್ನು ನಡೆಸಿ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿರುವುದು, ಅದ್ದೂರಿ ಮದುವೆಗಾಗಿ ಸಾಲ ಮೂಲಗಳನ್ನು ಮಾಡಿ ಜೀವನ ಪರ್ಯಂತ ನರಕಯಾತನೆ ಅನುಭವಿಸುವುದು ಕಂಡು ಬರುತ್ತದೆ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕಿ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ ಅ) ಅವರು ತೋರಿಸಿ ಕೊಟ್ಟ ಮಾದರಿ ವಿವಾಹ ನಡೆಸಲು ವದು ವರರು ಪೋಷಕರು ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು.

ಸಯ್ಯದ್ ಮಸ್ಹೂದು ತಂಙಳ್ ಕೂರತ್ ರವರು ಮಾತನಾಡಿ ಮದುವೆಯ ಹೆಸರಿನಲ್ಲಿ ಧರ್ಮ ವಿರೋದಿ ಚಟುವಟಿಕೆ ನಡೆಸಿದಲ್ಲಿ ನಿಮ್ಮ ಜೀವನದಲ್ಲಿ ಬರ್ಕತ್ತಿಲ್ಲದೆ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದರು. ಎಸ್. ವೈ. ಎಸ್ ವತಿಯಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದ ಜನರೇಟರ್ ನ್ನು ಪದ್ಮುಂಜ ಮಸೀದಿಗೆ ಕೊಡುಗೆಯಾಗಿ ಹಸ್ತಾಂತರಿ‌ಸಲಾಯಿತು. ಮಸೀದಿ ಮುಖ್ಯ ಗುರುಗಳಾದ ಹುಸೈನ್ ಸಅದಿ ಸುಲ್ತಾನಿ ಉಸ್ತಾದರು ಹಾಗೂ ಮುಹಮ್ಮದ್ ಸಫ್ವಾನ್ ಉಸ್ತಾದರು ಮೌಲೀದ್ ನಡೆಸಿಕೊಟ್ಟರು. ಮಸೀದಿ ಅಧ್ಯಕ್ಷ ರಫೀಕ್ ಅಂತರ, ಪ್ರ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಕೋಶಾಧಿಕಾರಿ ಯೂಸುಫ್ ಹಾಜಿ. ಎಸ್. ವೈ. ಎಸ್. ಕಾರ್ಯದರ್ಶಿ ತೌಸೀಫ್, ಕೋಶಾಧಿಕಾರಿ ಅಶ್ರಫ್ ಅಂತರ ಹಾಗೂ ಎಸ್. ವೈ. ಎಸ್ ‌ಸರ್ಕಲ್ ಝೋನ್ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ಜನ್ ರೇಟರಿಗಾಗಿ ಅತೀ ಹೆಚ್ಚು ಧನ ಸಹಾಯ ಒದಗಿಸಿಕೊಟ್ಟ ಆದಂ ಮಲೆಂಗಲ್ ರವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಿತಿ ಸದಸ್ಯರಾದ ಅಬ್ದುಲ್ ರಜಾಕ್ ಸಅದಿ ಪದ್ಮುಂಜಯವರು ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಅಬ್ದುಲ್ ರಾಶಿದ್ ಸಅದಿ ಪದ್ಮುಂಜ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here