








ಬೆಳ್ತಂಗಡಿ: ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾಂಸ್ಕೃತಿಕ ಸಮುಚ್ಚಯ, ನುಜಿಪ್ಪಾಡಿ, ಕಾಸರಗೋಡು, ಕನ್ನಡ ಭವನದ ರಜತ ಸಂಭ್ರಮ ನಾಡ – ನುಡಿ ಹಬ್ಬ ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಣಿತ ಭಜನಾ ಗುರುಗಳಾಗಿ ಹಾಗೂ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿ. ಹರೀಶ್ ನೆರಿಯ ಬೆಳ್ತಂಗಡಿ ಅವರ ಈ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್-2026 ” ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ಕನ್ನಡ ಭವನದ ಸಂಸ್ಥಾಪಕ ಡಾ. ವಾಮನ ರಾವ್ ಬೇಕಲ್ ರವರು ಹಾಗೂ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು. ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದ ಸದಸ್ಯರು ಉಪಸ್ಥಿತರಿದ್ದರು.









