ಮಡಂತ್ಯಾರಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

0

ಮಡಂತ್ಯಾರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅವರ ನೇತೃತ್ವದಲ್ಲಿ ಜೆಸಿಐ, ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್, ಮಡಂತ್ಯಾರು ಹೈಸ್ಕೂಲ್ ರಿಯೂನಿಯನ್ ಹಾಗೂ ಮಡಂತ್ಯಾರು ರೋಟರಿ ಕ್ಲಬ್ ಅವರ ಸಹಯೋಗದಲ್ಲಿ ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ ದೇರಳಕಟ್ಟೆ ಇದರ ನುರಿತ ವೈದ್ಯರ ತಂಡದಿಂದ “ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ” ನೆರವೇರಿತು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಮಡಂತ್ಯಾರಿನ ಅಧ್ಯಕ್ಷ ಜೇಸಿ ಸಾಯಿಸುಮಾ ಎಂ. ನಾವಡ, ರೋಟರಿ ಕ್ಲಬ್ ಮಡಂತ್ಯಾರಿನ ಅಧ್ಯಕ್ಷ ಮಾಕ್ಸಿಮ್ ಅಲ್ಬುಕರ್ಕ್, ಹೈಸ್ಕೂಲ್ ರಿಯೂನಿಯನ್ ನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ ಶುಭ ಹಾರೈಸಿದರು.

ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ವಿಭಾಗ ದೇರಳಕಟ್ಟೆಯ ವೈದ್ಯರಾದ ಡಾ. ಮಿಫ್ರಾ, ಡಾ. ಖಲೀದ್ , ಡಾ. ಗಿರಿಧರ್ ಹಾಗೂ ಪಬ್ಲಿಕ್ ರಿಲೇಶನ್ ಆಫೀಸರ್ ಭರತ್, ಕಲಾ ಸಭಾಂಗಣ ಹಾಗೂ ದುರ್ಗಾ ಕಾಂಪ್ಲೆಕ್ಸ್ ನ‌ ಮಾಲೀಕ ತಿಮ್ಮಪ್ಪ ಗೌಡ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಗೋಪಾಲ್ ಎಂ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ ವೇದಿಕೆಯಲ್ಲಿ ಅಲಂಕರಿಸಿದ್ದರು. ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷ ಜೇಸಿ ಅಮಿತಾ ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here