ಕಿರಣ್‌ರಾಜ್ ಕೆ. ಆರ್. ಅವರಿಗೆ ಹಿಮಾಲಯ ವುಡ್ ಬ್ಯಾಡ್ಜ್ ನಲ್ಲಿ ಅರ್ಹತೆ

0

ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಸ್ಕೌಟ್ ಮಾಸ್ಟರ್ ಕಿರಣ್‌ರಾಜ್ ಕೆ. ಆರ್. ಅವರು ಸ್ಕೌಟ್ಸ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ತರಬೇತಿ ಕೇಂದ್ರ, ಪಚ್ಮಾರಿ ವತಿಯಿಂದ ನೀಡಲಾಗುವ ಪ್ರಮಾಣಪತ್ರ ಹಾಗೂ ಪಾರ್ಚ್‌ಮೆಂಟ್‌ಗೆ ಭಾಜನರಾಗಿದ್ದಾರೆ.

ಅವರು, ಸೆ. 24ರಿಂದ 30 ರವರೆಗೆ ದೊಡ್ಡಬಳ್ಳಾಪುರದ ಆನಿಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ, ಸ್ಕೌಟ್ಸ್ ವಿಭಾಗದ ಲೀಡ‌ರ್ ಟ್ರೈನ‌ರ್ ಗೋಪಾಲಕೃಷ್ಣ ಅವರ ಶಿಬಿರ ನಾಯಕತ್ವದಲ್ಲಿ ತರಬೇತಿಯನ್ನು ಪಡೆದಿದ್ದರು.

ಶಾಲೆಯ ಪ್ರಾಂಶುಪಾಲ ಮನಮೋಹನ್ ನಾಯ್ಕ್ ಕೆ.ಜಿ. ಹಾಗೂ ಶಿಕ್ಷಕ ವೃಂದದಿಂದ ಶುಭಹಾರೈಸಲಾಯಿತು.

LEAVE A REPLY

Please enter your comment!
Please enter your name here