






ಕಲ್ಮಂಜ: ನಿಡಿಗಲ್, ಅಕ್ಷಯನಗರ ಯುವ ಬಿಲ್ಲವ ವೇದಿಕೆಯ ಮಾಸಿಕ ಸಭೆ ಜ.11ರಂದು ಉಮೇಶ್ ಪೂಜಾರಿ ಅಂಬಡೆದಡಿ ಅವರ ಮನೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 2026ನೇ ಸಾಲಿನ ಅಧ್ಯಕ್ಷರಾಗಿ ಕೃಷ್ಣಪ್ಪ ಬಂಗೇರ ವಿದ್ಯಾನಗರ, ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಬಳ್ಳಿದಡ್ಡ ಹಾಗೂ ಕೋಶಾಧಿಕಾರಿಯಾಗಿ ಭರತ್ ಬಂಗೇರ ಅಂಬಡೆದಡಿ ಆಯ್ಕೆಯಾದರು.


ಈ ಸಭೆಯ ಅಧ್ಯಕ್ಷತೆಯನ್ನು ಅಣ್ಣಿ ಪೂಜಾರಿ ಅಂಬಡೆದಡಿ ವಹಿಸಿದ್ದರು. ಅತಿಥಿಗಳಾಗಿ ನಾಣಿ ಪೂಜಾರಿ ಗುಮ್ಮಡಬೈಲು, ರುಕೇಶ್ ಅಕ್ಷಯನಗರ ಹಾಗೂ ನಿರಂಜನ್ ಪೂಜಾರಿ ಕಡಂಬು ಉಪಸ್ಥಿತರಿದ್ದರು. ಅನ್ವಿತಾ ಸ್ವಾಗತಿಸಿ, ನಾರಾಯಣ ಬಂಗೇರ ಬಳ್ಳಿದಡ್ಡ ಕಾರ್ಯಕ್ರಮ ನಿರೂಪಿಸಿದರು. ರುಕೇಶ್ ಅಕ್ಷಯನಗರ ವಂದಿಸಿದರು.









