ಜ.22: ನಾವೂರು ಮಹಮ್ಮಾಯಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ-ಭಕ್ತರಿಂದಲೇ ನಿರ್ಮಾಣವಾಗುತ್ತಿದೆ ದೇವಸ್ಥಾನ

0

ನಾವೂರು: ಗ್ರಾಮದ ಮಹಮ್ಮಾಯಿ ದೇವಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಜ.22ರಂದು ಬೆಳಗ್ಗೆ 8.20ಕ್ಕೆ ನಡೆಯಲಿದೆ. ಇದೆ ವೇಳೆ ಬ್ರಹ್ಮಕಲಶದ ಕುರಿತಾದ ಭಕ್ತರ ಸಭೆಯನ್ನು ಕೂಡ ಕರೆಯಲಾಗಿದ್ದು, ಮಹಮ್ಮಾಯಿ ಅಮ್ಮನ ದೇವಸ್ಥಾನದ ಜೀರ್ಣೋದ್ದಾರದ ನಂತರ ಅಕ್ಟೋಬರ್ ತಿಂಗಳ ನವರಾತ್ರಿಯ ಸಮಯದಲ್ಲಿ ಬ್ರಹ್ಮಕಲಶ ನಡೆಯಬೇಕಾಗಿರುವುದರಿಂದ ಕೇವಲ 6 ತಿಂಗಳ ಸಮಯದಲ್ಲಿ ಸ್ಥಳ ಶುದ್ದಿ ಪೂಜಾ ಪ್ರಕ್ರಿಯೆಗಳು ನಡೆಸಿ ದೇವಸ್ಥಾನದ ನಿರ್ಮಾಣ ಸುತ್ತುಪಾವಳಿ ಸಮೇತ ಮುಖ ಮಂಟಪದ ನಿರ್ಮಾಣ ಆಗಬೇಕಾಗಿರುವುದರಿಂದ ಗ್ರಾಮದ ಎಲ್ಲಾ ಮನೆಯವರ ಸಲಹೆ ಮತ್ತು ಸಹಕಾರದೊಂದಿಗೆ ಬಂದು ಮಾರ್ಗದರ್ಶನವನ್ನು ನೀಡಬೇಕೆಂದು ಟ್ರಸ್ಟ್‌ ವತಿಯಿಂದ ಕೇಳಿಕೊಳ್ಳಲಾಗಿದೆ.

ಕೇವಲ ಮಹಮ್ಮಾಯಿ ದೇವಿ ಭಕ್ತರಿಂದಲೇ ಶ್ರಮಾದಾನದ ಮೂಲಕ ಕೇವಲ ಆರು ತಿಂಗಳಿನಲ್ಲಿ ಈ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here