ಅಳದಂಗಡಿ: ಸದ್ಭಾವನಾ ವೇದಿಕೆಯಿಂದ ಸೌಹಾರ್ಧ ಕ್ರಿಸ್ಮಸ್ ಸಂಭ್ರಮ

0

ಅಳದಂಗಡಿ: ಸದ್ಭಾವನಾ ವೇದಿಕೆ ಹಮ್ಮಿಕೊಂಡ ಸೌಹಾರ್ಧ ಕ್ರಿಸ್ಮಸ್ ಸಂಭ್ರಮ, ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಸಂಭಾಂಗಣದಲ್ಲಿ ಜ.11ರಂದು ನಡೆಯಿತು. ಇಸಾಕ್ ಸಿ.ಎ., ಪುತ್ತೂರು, ಮಂಜುನಾಥ್ ಪಿ. ಕೆ. ಬಳಂಜ ಹಾಗೂ ರೆ| ಫಾ| ಎಲ್ಯಾಸ್ ಡಿಸೋಜರವರು ಸಂದೇಶ ನೀಡಿದರು.

ವೇದಿಕೆಯ ಅಧ್ಯಕ್ಷ ಸಭಾಸ್ಚಂದ್ರ ರೈ ಅಧ್ಯಕ್ಷೀಯ ಭಾಷಣದಲ್ಲಿ ಸದ್ಭಾವನಾ ವೇದಿಕೆ ರಾಜಕೀಯ ಪ್ರಭಾವರಹಿತ ವೇದಿಕೆಯಾಗಿ ಬೆಳಯಲಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ಉಳ್ಳಾದ ಸದ್ಭಾವನಾ ವೇದಿಕೆಯ ಸದಸ್ಯರು ಆಗಮಿಸಿದ್ದರು. ಹಾಗೂ ಮಂಗಳೂರಿನ ಪೊಸಕುರಲ್ ಸುದ್ದಿ ವಾಹಿನಿಯ ತಂಡ ಕಾರ್ಯಕ್ರಮವನ್ನು ಪ್ರಸಾರ ಮಾಡಿದರು.

LEAVE A REPLY

Please enter your comment!
Please enter your name here