ಬಾಲಕ ಸುಮಂತ್‌ ಶವ ಪತ್ತೆ ಪ್ರಕರಣ: ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ-ಸಮಗ್ರ ತನಿಖೆಗೆ ಆಗ್ರಹ

0

ಬೆಳ್ತಂಗಡಿ: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ನಿಗೂಢ ನಾಪತ್ತೆಯಾಗಿ ಹುಡುಕಾಟದ ನಂತರ ತೋಟದ ಬಾವಿಯಲ್ಲಿ ಶವ ಜ.14ರಂದು ಪತ್ತೆಯಾಗಿತ್ತು. ಇದೀಗ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಭೇಟಿ ನೀಡಿ ಘಟನೆ ಕುರಿತಾಗಿ ಮಾಹಿತಿ ಪಡೆದರು. ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಇದೀಗ ಬಾಲಕನ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

LEAVE A REPLY

Please enter your comment!
Please enter your name here