






ಬೆಳ್ತಂಗಡಿ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೋಪಾಲಕೃಷ್ಣ ಸೇವಾ ಟ್ರಸ್ಟ್ ವತಿಯಿಂದ ಕಳೆದ 10ವರ್ಷಗಳಿಂದ ಧನರ್ಮಾಸದಲ್ಲಿ ಭಕ್ತರಿಂದ ವಿಷ್ಣಸಹಸ್ರನಾಮ ಪಠಣ ನಡೆಯುತ್ತಿದ್ದು, ಜ.13ರಂದು ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಯ ವರದಿಗಾರ ನಿಶಾನ್ ಬಂಗೇರ ಹಾಗೂ ಪ್ರಧಾನ ನಿರೂಪಕಿ ಶ್ರೇಯಾ ಶೆಟ್ಟಿ, ನಾವೂರ, ಯುವ ಉದ್ಯಮಿ ಸಾಮಾಜಿಕ ಕಾರ್ಯಕರ್ತ ಸಂತೋಷ್ ಕಾಪಿನಡ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್, ಸಂತೋಷ್ ಕೋಟ್ಯಾನ್ ಭಾಗಿಯಾಗಿ ದೀಪ ಪ್ರಜ್ವಲನೆ ಮಾಡಿದರು.

ಡಾ. ಪ್ರದೀಪ್ ನಾವೂರ ಅವರ ಮುಂದಾಳತ್ವದಲ್ಲಿ ಕಳೆದ 29 ದಿನಗಳಿಂದ ಬ್ರಾಹ್ಮೀ ಮುಹೂರ್ತ 4.55ಗಂಟೆಗೆ ಐನೂರಕ್ಕೂ ಮಿಕ್ಕಿ ಭಕ್ಥಾದಿಗಳು ಭಾಗಿಯಾಗಿ ವಿಷ್ಣುಸಹಸ್ರನಾಮ ಪಠಣ ಮಾಡುತ್ತಿದ್ದು, ಮಕ್ಕಳು ಭಗವದ್ಗೀತೆ ಶ್ಲೋಕ ಪಠಣ ಮಾಡುತ್ತಿದ್ದಾರೆ. ಜ.14ಕ್ಕೆ ಧನುರ್ಮಾಸದ ಕೊನೆಯ ದಿನವಾಗಿದ್ದು ವಿಶೇಷ ಪೂಜಾ ಕೈಕಂರ್ಯಗಳು ನಡೆಯಲಿದೆ.



ಜ.23ರಿಂದ ಫೆ.1ರವರೆಗೆ ನಾವೂರ ಜಾತ್ರೆ ನಡೆಯಲಿದ್ದು, ವಿಷ್ಣು ಸಹಸ್ರನಾಮ ಪಠಣದ ದಶಮಾನೋತ್ಸವ ಹಿನ್ನೆಲೆ ಪ್ರತಿದಿನ ಸಂಜೆ ಡಾ.ವೀಣಾ ಬನ್ನಂಜೆ ಇವರಿಂದ ಶ್ರೀ ಕೃಷ್ಣ ಕಥಾಮೃತ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಜ.29ರಂದು ಸಹಸ್ರಾರು ಭಕ್ತರಿಂದ ಏಕಕಂಠದಲ್ಲಿ ಬೃಹತ್ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ನಡೆಯಲಿದೆ. ಈ ದಿನ ನಡೆದ ಕಾರ್ಯಕ್ರಮದಲ್ಲಿ ಡಾ.ಕವಿತಾ ಪ್ರದೀಪ್, ಮೂಲ್ಯರ ಯಾನೆ ಕುಂಬಾರರ ಸಂಘದ ಹರೀಶ್ ಕಾರಿಂಜ, ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಪಿಡಿಓ ಮೋಹನ್ ಬಂಗೇರ, ಗಣೇಶ್ ಗೌಡ ನಾವೂರ, ಸೇರಿದಂತೆ ಊರ ಭಕ್ತಾದಿಗಳು ಭಾಗವಹಿಸಿದ್ದರು









