







ಮಚ್ಚಿನ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ನಿಂದ ಸ್ಮಾರ್ಟ್ ಬೋರ್ಡನ್ನು ಹಸ್ತಾಂತರಿಸಿದರು. ಕರ್ನಾಟಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಡಿಜಿಟಲ್ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ಯುವ ಬೆಂಗಳೂರು ಟ್ರಸ್ಟ್ ನಿಂದ ಸುಮಾರು ಮೂರು ಲಕ್ಷ ವೆಚ್ಚದ ಸ್ಮಾರ್ಟ್ ಬೋರ್ಡನ್ನು ಸಂಸ್ಥೆಯ ಸಂಸ್ಥಾಪಕ ಜಿ. ಕಿರಣ್ ಸಾಗರ್ ಅವರು ಮಚ್ಚಿನ ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಅವರಿಗೆ ಹಸ್ತಾಂತರಿಸಿದರು.


ಯುವ ಬೆಂಗಳೂರು ಸಂಸ್ಥೆಯ ಅಧ್ಯಕ್ಷರು/ ಟ್ರಸ್ಟ್ ಗಳಾದ ಬಿ.ವಿ ಸುನಿಲ್, ಯುವ ಟ್ರಸ್ಟ್ ನ ಸ್ವಯಂ ಸೇವಕರು ಮತ್ತು ಪುಂಜಾಲಕಟ್ಟೆ ಕ್ಲಸ್ಟರ್ ಸಿ.ಆರ್.ಪಿ ಚೇತನ, ಮಚ್ಚಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್, ಸದಸ್ಯರಾದ ಪರಮೇಶ್ವರ್, ಕಿರಣ್ ಭಟ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
✍️ಹರ್ಷ ಬಳ್ಳಮಂಜ









