ಬಳಂಜ: ಮಂಡಲ ಹಿಂದೂ ಸಂಗಮ ಆಮಂತ್ರಣ ಬಿಡುಗಡೆ

0

ಬೆಳ್ತಂಗಡಿ: ಹಿಂದೂ ಸಂಗಮ ಆಯೋಜನ ಸಮಿತಿ ಬಳಂಜ ಮಂಡಲ ಜ. 25ರಂದು ಮಧ್ಯಾಹ್ನ ನಡೆಯಲಿರುವ ಗುಂಡೇರಿ ಅವರಣದಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದವರೆಗೆ ನಡೆಯುವ ಹಿಂದೂ ಸಂಗಮ ಶೋಭಾ ಯಾತ್ರೆ ಮತ್ತು ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ್ ಸಾಲಿಯನ್ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜ. 11ರಂದು ಬಿಡುಗಡೆ ಮಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ, ನವೀನ್ ಸಾಮಾನಿ, ನಿತ್ಯಾನಂದ ನೊಚ್ಚ, ಸಂತೋಷ್ ಕಾಪಿನಡ್ಕ, ಸಂಚಾಲಕ ರಾಕೇಶ್ ಹೆಗ್ಡೆ ಬಳಂಜ, ಶ್ರೀನಿವಾಸ ರೈ ಕಾರಂದೂರು, ರಾಘವೇಂದ್ರ ಭಟ್, ಪ್ರಸಾಂತ್ ಕರಂಬಾರು, ರಮೇಶ್ ಬಜನೋಡಿ, ವಿದ್ಯಾನಂದ, ಲೀಲಾವತಿ ಪ್ರಕಾಶ್ ಆಚಾರ್ಯ, ರಕ್ಷಿತ್ ಕರಂಬಾರು, ಸೋಮನಾಥ್ ಶಿರ್ಲಾಲು, ಮತ್ತು ಊರವರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here