ಉಜಿರೆ: ಒಂದು ದಿನದ ರೈತ ತರಬೇತಿ

0

ಉಜಿರೆ: ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟ, ಬೆಳ್ತಂಗಡಿ ಜಿಲ್ಲಾ ರೈತ ತರಬೇತಿ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರೈತ ತರಬೇತಿಯು ಉಜಿರೆ ಪಂಚಾಯತ್ ಪ್ರಾಂಗಣದಲ್ಲಿ ನಡೆಯಿತು.

ಒಕ್ಕೂಟದ ಪದಾಧಿಕಾರಿ ಸುನಂದ ಅವರು ಎಲ್ಲರನ್ನು ಸ್ವಾಗತಿಸಿದರು. ಕೃಷಿ ಸಖಿ ಭಾಗೀರತಿ ಅವರು ರೈತ ತರಬೇತಿಯ ಉದ್ದೇಶಗಳು ನ್ಯಾಚುರಲ್ ಫಾರ್ಮಿಂಗ್ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಸಾವಯವ ಕೃಷಿ ಮಾಡುವದರಿಂದ ಆಗುವ ಉಪಯೋಗಗಳು ಇದರ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಗಣೇಶ್ ಅವರು ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ತರಬೇತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಅವರು ರಾಸಾಯನಿಕ ಬಳಕೆ ಮಾಡಿ ಬೆಳೆದ ತರಕಾರಿಗಳನ್ನು ನಾವು ಉಪಯೋಗಿಸುವುದರಿಂದ ಬರುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿದರು. ಹಾಗೂ ನಾವು ಮನೆಯಲ್ಲಿಯೇ ತರಕಾರಿಗಳನ್ನು ಬೆಳೆದು ಆರೋಗ್ಯವಂತರಾಗಬೇಕೆಂದು ರೈತರಲ್ಲಿ ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿ ಪ್ರಭಾಕರ್ಮಯ್ಯ ಅವರು ಸಾವಯವ ಕೃಷಿ ಮಾಡುವ ವಿಧಾನ, ಅದರಿಂದ ನಮಗಾಗುವ ಪ್ರಯೋಜನ, ತರಕಾರಿ ಗಿಡಗಳನ್ನು ಬೆಳೆಸುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನಮುಟ್ಟುವಂತೆ ತಿಳಿಸಿದರು. ಬಂದ ಎಲ್ಲಾ ರೈತರಿಗೆ ತರಕಾರಿ ಬೀಜಗಳನ್ನು ವಿತರಣೆ ಮಾಡಲಾಯಿತು. ಹಾಗೂ ನೈಸರ್ಗಿಕ ಕೃಷಿ ಫಲಾನುಭವಿಗಳಿಗೆ ಕಿಟ್ ಹಿತರಿಸಲಾಯಿತು. ಕೃಷಿ ಸಖಿ ಭಾಗೀರತಿ ಹಾಗೂ ಪಶುಸಖಿ ಏಕಲತಾ ಅವರು ಜೀವಾಮೃತವನ್ನು ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಡಿ ತೋರಿಸಿದರು. ಸಭೆಯಲ್ಲಿ ಜಿಲ್ಲಾ ರೈತ ತರಬೇತಿ ಕೇಂದ್ರದ ಎಡಿಎ ರಮೇಶ್, ಒಕ್ಕೂಟದ ಕಾರ್ಯದರ್ಶಿ ದೀಪ, ಕೋಶಾಧಿಕಾರಿ ವೀಣಾ, LCRP ಚಿತ್ರ, ಪದಾಧಿಕಾರಿಗಳು, ಸಂಜೀವಿನಿ ಸದಸ್ಯರು, ರೈತರು ಭಾಗವಹಿಸಿದ್ದರು. ಸುಮಾರು 65 ರೈತರು ಇದರ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here