






ವೇಣೂರು: ದೇಶದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಬಿತ್ತುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಕೇವಲ ಸರ್ಟಿಫಿಕೆಟ್ ಆಧರಿತ ಶಿಕ್ಷಣದ ವ್ಯವಸ್ಥೆಯಲ್ಲಿ ಬದುಕಿದರೆ ಪೋಷಕರು ಆಶ್ರಮ ಸೇರಬಹುದಾದ ಪರಿಸ್ಥಿತಿ ಬರಬಹುದು. ಅಂದು ಗುರುಕುಲದಲ್ಲಿ ನಡೆಯುತ್ತಿದ್ದ ಗುರುಕುಲ ಪದ್ದತಿಯ ಶಿಕ್ಷಣ ವ್ಯವಸ್ಥೆ ಇಂದು ಕುಂಭಶ್ರೀಯಲ್ಲಿ ನಡೆಯುತ್ತಿದೆ. ಜನ್ಮ ನೀಡಿ ಪೋಷಿಸುವ ಮಾತಾ-ಪಿತಾರನ್ನು ಹಾಗೂ ಜೀವನಕ್ಕೆ ಶಕ್ತಿ, ಜ್ಞಾನದ ಧಾರೆಯನ್ನು ಎರೆಯುವ ಗುರುವನ್ನು ನೆನೆಯುವ ವೈಶಿಷ್ಟ ಪೂರ್ಣ ಕಾರ್ಯಕ್ರಮ ಕುಂಭಶ್ರೀ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜ. 6ರಂದು ವೇಣೂರು ನಿಟ್ಟಡೆಯ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆದ ಮಾತಾ-ಪಿತಾ ಗುರುದೇವೋಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿ ಸರಕಾರಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್ ಎಂಆರ್‌ಪಿಎಲ್ ಅನುದಾನದಡಿ ನಿರ್ಮಾಣಗೊಂಡಿರುವ ಮಾಂಟೇಸರಿ ತರಗತಿ ಕೊಠಡಿಯನ್ನು ಉದ್ಘಾಟಿಸಿದರು.
ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್. ಅವರು ಅಧ್ಯಕ್ಷತೆ ವಹಿಸಿ, ಶಾಲೆ ರಾಜ್ಯ, ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳಲು ಇಲ್ಲಿ ಶಿಕ್ಷಣ ನೀಡಿದ ಶಿಕ್ಷಕ ವೃಂದ, ಪೋಷಕರು ಹಾಗೂ ಸಾಧನೆಗೈದಿರುವ ಮಕ್ಕಳೇ ಕಾರಣ ಎಂದರು.


ಈ ಕಾರ್ಯಕ್ರಮದಲ್ಲಿ ಮೋಕ್ಷಿತ್ ಅರ್ಥ್ ಮೂವರ್‍ಸ್‌ನ ಮಾಲಕ ಜಯರಾಮ್ ಕುಲಾಲ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಬೆಳ್ತಂಗಡಿ, ಮಂಗಳೂರಿನ ಎಲ್‌ಐಸಿ ಮಾರ್ಗದರ್ಶಕಿ ರೇಖಾ ಕೋಟೆಕಾರ್, ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ಶ್ರೀಧರ್ ಶೆಟ್ಟಿ, ವೇಣೂರು ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಗುಣವತಿ ಡಿ., ಕುಂಡದಬೆಟ್ಟು ಅಂಗನವಾಡಿ ಶಿಕ್ಷಕಿ ಜಯಶ್ರೀ, ಕುಂಡದಬೆಟ್ಟು ಮಂಜುಶ್ರೀ ಭಜನ ಮಂಡಳಿ ಅಧ್ಯಕ್ಷ ಆನಂದ ಟೈಲರ್, ಮಂಗಳತೇರು ಅಂಗನವಾಡಿಯ ಶಿಕ್ಷಕಿ ಪ್ರಮೀಳಾ, ಕೊಳಲ ಮುಗೆರಡ್ಕ ಅಂಗನವಾಡಿಯ ಶಿಕ್ಷಕಿ ವಸಂತಿ, ಕುಂಡದಬೆಟ್ಟು, ಕುಕ್ಕೇಡಿ ಹಾಲು ಉ.ಸ.ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಕರಿಮಣೇಲು ಸಂತ ಜೂಡರ ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಲೀನಾ ಮರ್ಸಲಿನ್, ವೇಣೂರು ಭಾರತೀ ಶಿಶು ಮಂದಿರದ ಮಾತಾಜಿ ಹೇಮಾ ಶ್ರೀಧರ್ ಕುಲಾಲ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಮತಾ ಶಾಂತಿ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಮನೋಜ್ ಎಸ್., ಪ್ರಾಂಶುಪಾಲೆ ಓಮನಾ ಎಂ.ಎ., ಶಾಲಾ ಶೈಕ್ಷಣಿಕ ಸಲಹೆಗಾರರಾದ ಉಷಾ ಜಿ, ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಮಾಲಾಡಿ ಗ್ರಾ.ಪಂ. ಸದಸ್ಯರಾದ ದಿನೇಶ್ ಎಸ್. ಸೋಣಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಪ್ರಾಸ್ತಾವಿಸಿ, ಸ್ವಾಗತಿಸಿದರು.
ಜೀವನದಲ್ಲಿ ತಾಯಿ, ತಂದೆ ಹಾಗೂ ಗುರುವಿನ ಪಾತ್ರದ ಮಹತ್ವವನ್ನು ತಿಳಿಸುವ ಮಾತಾ ಪಿತಾ ಗುರುದೇವೋಭವ ಎಂಬ ಹೃದಯಸ್ಪರ್ಶಿ ಎಂಬ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹತ್ತನೇ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೆತ್ತವರಿಗೆ ಆರತಿ ಬೆಳಗಿಸಿ ಪೂಜಿಸಿದರು. ವಿದ್ಯಾರ್ಥಿಗಳು ಹೆತ್ತವರ ಪಾದಸ್ಪರ್ಶ ಮಾಡಿದಾಗ ಹೆತ್ತವರ ಕಣ್ಣಂಚಿನಿಂದ ಆನಂದಭಾಷ್ಪ ಹರಿಯಿತು. ಹೆತ್ತವರ ಕ್ಷಮಾಭಾವನೆ ಮತ್ತು ಪೂಜೆಯಿಂದ ಸಂಪೂರ್ಣ ಜ್ಞಾನ ಮತ್ತು ಮುಕ್ತಿ ಸಿಗುತ್ತದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿತು. ಮಾತಾ ಪಿತ ಗುರು ದೇವೋಭವ ಹೃದಯ ಸ್ಪರ್ಶಿ ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ನಿತೇಶ್, ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ ಸೌಮ್ಯ, ದೈಹಿಕ ಶಿಕ್ಷಕ ಶೈಲೇಶ್ ನಿರೂಪಿಸಿದರು.









