








ಉರುವಾಲು: ಗ್ರಾಮ ಕಾರಿಂಜ ಶ್ರೀ ವನಶಾಸ್ತರ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಕಿರಣ್ ಚಂದ್ರ ಪುಷ್ಪಗಿರಿ ಅವರನ್ನು ಭೇಟಿ ನೀಡಿ ಜೀರ್ಣೋದ್ದಾರ ಅಭಿವೃದ್ಧಿ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಲಾಯಿತು. ನೆಲಹಾಸು ಗ್ರಾನೈಟ್ ಕೆಲಸಕ್ಕೆ ಧನ ಸಹಾಯ ನೀಡುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ರೂ.1.00ಲಕ್ಷ ದೇಣಿಗೆ ಹಸ್ತಾಂತರ ಮಾಡಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೊರಗಪ್ಪ ಪೂಜಾರಿ, ಜೀರ್ಣೋದ್ದಾರ ಕಾರ್ಯಾಧ್ಯಕ್ಷ ವಿಜಯ ಕುಮಾರ್ ಕಲ್ಲಲಿಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ, ಕಾರ್ಯಧ್ಯಕ್ಷರಾದ ಸುನಿಲ್ ಗೌಡ ಅನವು, ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್, ಪಂಚಾಯತ್ ಸದಸ್ಯೆ ಉಮಾವತಿ ಕೋಡಿಯಡ್ಕ, ಟ್ರಸ್ಟಿನ ಕಾರ್ಯದರ್ಶಿ ದರ್ಣಪ್ಪ ನಾಯ್ಕ ಆನಡ್ಕ ಹಾಗೂ ವಿನೋದರ ಸಾಲ್ಯಾನ್, ಸತೀಶ್ ಪಿಲಿಕಲ್, ಸುಧಾಕರ ಪ್ರಭು, ಸುರೇಂದ್ರ ಪೂಜಾರಿ ವಿವಿಧ ಸಮಿತಿ ಮತ್ತು ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









