






ಕುವೆಟ್ಟು: ಹಿಂದೂ ಸಾಮರಸ್ಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ನಿಟ್ಟಿನಲ್ಲಿ ಗುರುವಾಯನಕೆರೆ ಮಂಡಲದಲ್ಲಿ ಜ.18ರಂದು ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಗುರುವಾಕನಕೆರೆಯ ಕುಲಾಲ್ ಮಂದಿರಲ್ಲಿ ಜ.8ರಂದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಡಾ.ವೇಣುಗೋಪಾಲ್ ಶರ್ಮಾ, ಹಾಗೂ ಹಿಂದೂ ಸಂಗಮ ಸ್ಟಿಕ್ಕರನ್ನು ನಿವೃತ್ತ ಶಿಕ್ಷಕಿ ಬೇಬಿ ಬಿಡುಗಡೆ ಮಾಡಿದರು. ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷ ವಸಂತ ಮಜಲು, ಸಂಯೋಜಕ ಅನಿಲ್ ಕುಮಾರ್, ಸಹ ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಜೊತೆ ಕಾರ್ಯದರ್ಶಿ ಶ್ರೇಯಾ ಶೆಟ್ಟಿ, ಗುರುವಾಯನಕೆರೆ ಮಂಡಲದ ಸಂಯೋಜಕ ಚಿದಾನಂದ ಇಡ್ಯಾ ಉಪಸ್ಥಿತರಿದ್ದರು.


ನವಶಕ್ತಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ. ಗುರುವಾಯನಕೆರೆ ಮಂಡಲದ ಕುವೆಟ್ಟು, ಮೇಲಂತಬೆಟ್ಟು, ಓಡಿಲ್ನಾಳ, ನ್ಯಾಯತರ್ಪು, ಕಳಿಯ ಮತ್ತು ಮುಂಡೂರು ಈ ಆರು ಗ್ರಾಮಗಳ ಗ್ರಾಮಸ್ಥರು ಈ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.









