






ಲಾಯಿಲ: ಕಾವಟೆ ನಿವಾಸಿ ದಿ| ಐತಪ್ಪ ಗೌಡ ಅವರ ಪುತ್ರ ದಾಮೋದರ ಗೌಡ (54 ವರ್ಷ) ಅವರು ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಉದ್ಯೋಗದಲ್ಲಿದ್ದು, ಡಿ. 28ರಂದು ಹೃದಯಾಘಾತದಿಂದ ನಿಧನರಾದರು.


ಮೃತರ ಪಾರ್ಥಿವ ಶರೀರ ಜ. 9ರಂದು ಬೆಂಗಳೂರಿಗೆ ತಲುಪಲಿದ್ದು, ಜನವರಿ 9ರ ಸಂಜೆ ಲಾಯಿಲ ಕಾವಟೆಯ ಸ್ವಗೃಹದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಿದ್ದಾರೆ.
ಮೃತರು ಪತ್ನಿ, ಮಕ್ಕಳು, ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.









