ಬೆಳ್ತಂಗಡಿ: ಸಂಚಾರಿ ಠಾಣೆಯ ಮೊದಲ ಮಹಡಿಯಲ್ಲಿ ಡಿವೈಎಸ್ಪಿ ಕಚೇರಿ ಆರಂಭ

0

ಬೆಳ್ತಂಗಡಿ:ವೃತ್ತ ನಿರೀಕ್ಷಕ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ಉಪವಿಭಾಗದ ನೂತನ ಡಿವೈಎಸ್ಪಿಯವರು ಡಿ.26ರಿಂದ ಬೆಳ್ತಂಗಡಿ ಸಂಚಾರಿ ಠಾಣೆಯ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳನ್ನು ಕೇಂದ್ರೀಕರಿಸಿ ಬಿ.ಸಿ. ರೋಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಡಿವೈಎಸ್ಪಿ ಕಚೇರಿ ಇಬ್ಬಾಗಗೊಂಡು ಬೆಳ್ತಂಗಡಿ ಉಪವಿಭಾಗ ಹೊಸದಾಗಿ ಅಸ್ವಿತ್ವಕ್ಕೆ ಬಂದಿದ್ದು ಪ್ರಥಮ ಡಿ.ವೈ.ಎಸ್.ಪಿಯಾಗಿ ರೋಹಿಣಿ ಸಿ.ಕೆ. ಅವರು ನ.10ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ಬಂಟ್ವಾಳ ಉಪ ವಿಭಾಗದಿಂದ ಬೆಳ್ತಂಗಡಿಯನ್ನು ಪ್ರತ್ಯೇಕಿಸಿ ಹೊಸದಾಗಿ ಉಪವಿಭಾಗ ಕಾರ್ಯರೂಪಕ್ಕೆ ತರಲಾಗಿದ್ದು ಹೊಸದಾಗಿ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ಉಪವಿಭಾಗಕ್ಕೆ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಉಪ್ಪಿನಂಗಡಿ, ಕಡಬ ಮತ್ತು ಬೆಳ್ತಂಗಡಿ ಸಂಚಾರಿ ಠಾಣೆಯ ವ್ಯಾಪ್ತಿ ಸೇರಿದೆ. ಹೊಸ ಡಿವೈಎಸ್‌ಪಿಯವರು ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಬೆಳ್ತಂಗಡಿ ಸಂಚಾರಿ ಠಾಣೆಯ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂರು ಸಿಬ್ಬಂದಿಗಳು: ಸಂಚಾರಿ ಠಾಣೆಯಲ್ಲಿ ಹೊಸದಾಗಿ ಮಾಡಿರುವ ಬೆಳ್ತಂಗಡಿ ಡಿವೈಎಸ್‌ಪಿ ಕಚೇರಿಯಲ್ಲಿ ಪ್ರಸ್ತುತ ಎಎಸ್‌ಐ ಲಾರೆನ್ಸ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಪ್ರವೀಣ್ ಕುಮಾರ್ ಹಾಗೂ ಮನೋಹರ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here