ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

0

ಉಜಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕ್ರೀಡೋತ್ಸವದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗೈಡ್ ವಿಭಾಗದಲ್ಲಿ 1500ಮೀ ಓಟದಲ್ಲಿ ನಿಶಾ ಪ್ರಥಮ ಸ್ಥಾನ, ತೃಷಾ 400ಮೀ ಓಟ ದ್ವಿತೀಯ ಸ್ಥಾನ ಹಾಗೂ 200ಮೀ ಓಟ ತೃತೀಯ ಸ್ಥಾನ, ಸ್ಕೌಟ್ಸ್ ವಿಭಾಗದಲ್ಲಿ ಡಿಸ್ಕಸ್ ಥ್ರೋ ರಂಜನ್ ತೃತೀಯ ಸ್ಥಾನ, ಬುಲ್ ಬುಲ್ ವಿಭಾಗದಲ್ಲಿ 100ಮೀ ಓಟ ಸಾನಿಧ್ಯ ತೃತೀಯ ಸ್ಥಾನ ಹಾಗೂ ಗುಂಡೆಸೆತ ರಿತ್ಸಿಕಾ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶಾಲಾ ದೈಹಿಕ ಶಿಕ್ಷಕಿ ರಾಜಮ್ಮ ಹಾಗೂ ಗಣೇಶ್ ತರಬೇತಿ ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here