









ಬೆಳ್ತಂಗಡಿ: ಕುಕ್ಕಳ ಮತ್ತು ಮಾಲಾಡಿ ಗ್ರಾಮದ ಗ್ರಾಮಸ್ಥರ ಬಹುಬೇಡಿಕೆಯ ಸಂಪರ್ಕ ರಸ್ತೆಯಾದ ಪುಂಜಾಲಕಟ್ಟೆ-ಪುರಿಯ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಸೂಕ್ತ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ, ಸರಕಾರದಿಂದ ರೂ.50ಲಕ್ಷ ಮೊತ್ತಕ್ಕೆ ಅನುಮೋದನೆ ದೊರಕಿದ್ದು ಸದ್ರಿ ಕಾಮಗಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆದೇಶವಾಗಿರುತ್ತದೆ. ಹಾಗಾಗಿ ಆ ಭಾಗದ ಸಾರ್ವಜನಿಕರ ಉಪಯೋಗಕ್ಕೆ ಆದ್ಯತೆಯ ಈ ಕಾಮಗಾರಿಗೆ ರೂ.50ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದರು.









