








ಬೆಳ್ತಂಗಡಿ: ಪಶು ಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ರಾಜ್ಯ ಸರಕಾರದ ಯೋಜನೆಯಾದ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಜನವರಿ-2026ರಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಅತೀ ಹೆಚ್ಚು ಹಾಲು ಇಳುವರಿ ಕೊಡುವ ದನದ ಹಾಲನ್ನು ಬೆಳಿಗ್ಗೆ ಹಾಗೂ ಸಾಯಂಕಾಲ ಸಂಗ್ರಹಿಸಿ ದಾಖಲು ಮಾಡಿಕೊಂಡು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುವುದು. ಭಾಗವಹಿಸುವ ಆಸಕ್ತ ರೈತರು ದಿನಕ್ಕೆ ಕನಿಷ್ಠ 20ಲೀ ಹಾಲು ನೀಡುವ ಹಸುಗಳ ಮಾಹಿತಿಯನ್ನು ನಿಗದಿತ ಅರ್ಜಿ ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಜ.17ರಂದು ಮೊದಲು ಕಾರ್ಯದರ್ಶಿಯವರಲ್ಲಿ ನೀಡಬೇಕು ಎಂದು ಬೆಳ್ತಂಗಡಿ ಮುಖ್ಯ ಪಶುವೈದ್ಯಧಿಕಾರಿ ರವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









