






ಶಿಶಿಲ: ಸುಮಾರು 14ವರ್ಷಗಳಿಂದ ಶಿಶಿಲೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ ಮಂಚಿತ್ತಾಯ(53)ಅಲ್ಪಕಾಲದ ಅನಾರೋಗ್ಯದಿಂದ ದೈವಾದಿನರಾಗಿದ್ದರು. ಈ ಹಿನ್ನೆಲೆಯಲ್ಲಿ ದೇವಳದ ವ್ಯವಸ್ಥಾಪನ ಸಮಿತಿ, ಸಿಬ್ಬಂದಿವರ್ಗ ಹಾಗೂ ಊರವರ ವತಿಯಿಂದ ದೇವಳದ ಆವರಣದಲ್ಲಿ ನುಡಿನಮನ ಕಾರ್ಯಕ್ರಮ ಏರ್ಪಡಿಸಿದ್ದರು.


ದೇವಾಲಯ, ವ್ಯವಸ್ಥಾಪನ ಸಮಿತಿ, ಮತ್ತು ಊರವರು ಅರ್ಚಕರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದರು. ಅವರು ಮಾಡುತ್ತಿದ್ದ ದೇವರ ಸೇವೆಯ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನ್ನಾಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ, ಸದಸ್ಯರಾದ ನಾರಾಯಣ ಸುವರ್ಣ, ಶ್ರೀಧರ್ ರಾವ್ ಕಾಯಡ ಚೆನ್ನಪ್ಪ ನಲಿಕೆ, ರಮೇಶ್, ಸುಂದರ, ವಿಮಲ, ಪ್ರೇಮ, ಪ್ರಧಾನ ಅರ್ಚಕ ಶ್ರೀರಾಮ ಕಾರಂತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.









