






ಬೆಳ್ತಂಗಡಿ: ಪೊಲೀಸ್ ಠಾಣೆಯ ಅ.ಕ್ರ. 68/1989 (ಕಲಂ 341, 323, 326, ಜೊತೆಗೆ 34 ಐ ಪಿ ಸಿ ) ಹಾಗೂ CC No. 1720/1990, CR No. LPC 04/1992 ಪ್ರಕರಣದಲ್ಲಿ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ರವೀಂದ್ರ ಚಾರ್ಮಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಕಾರ್ಕಳ ತಾಲೂಕು ನಲ್ಲೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಜ.6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ದೀರ್ಘಕಾಲದಿಂದ ನ್ಯಾಯಾಲಯದ ವಾರಂಟ್ ಬಾಕಿ ಉಳಿದಿದ್ದ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯು ಯಶಸ್ವಿಯಾಗಿದೆ.









