









ಕಳೆಂಜ: ಕಾಯಡ ಎಂಬಲ್ಲಿ ವಿದ್ಯುತ್ ಕಂಬ ಮತ್ತು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಪಾದಾಚಾರಿಗಳ ಮಾಹಿತಿಯ ಹಿನ್ನೆಲೆ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಜ.5ರಂದು ತೆರವುಗೊಳಿಸಲಾಯಿತು. ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರಾದ ಹರೀಶ್ ವಳಗುಡ್ಡೆ, ಧನಂಜಯ ಗೌಡ ವಲಚ್ಚಿಲು, ಯೋಗೀಶ್ ಸೀಂಬೂಲು ಮತ್ತು ಗ್ರಾಮಸ್ಥರ ಸಹಾಯದಿಂದ ಮರ ಮತ್ತು ಕಂಬವನ್ನ ತೆರವುಗೊಳಿಸಿ ಬೆಳಗ್ಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.









