






ಕಲ್ಮoಜ: ದ. ಕ. ಜಿ. ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಿತಿ ಶತ ಸಂಭ್ರಮ ಹಳೇವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಜ. 4ರಂದು ಜ್ಞಾನ ದೀಪ ವೇದಿಕೆಯಲ್ಲಿ ನಡೆಯಿತು.

ಶ್ರೀ ಮಹಾಗಣಪತಿ ದೇವಸ್ಥಾನ ನಿಡಿಗಲ್ ಇದರ ಆಡಳಿತ ಮೊಕ್ತೇಸರ ನಾಗೇಶ್ ಪ್ರಭು ದೀಪ ಪ್ರಜ್ವಲನೆ ಮಾಡಿದರು.
ಛದ್ಮವೇಷ ಸ್ಪರ್ಧೆ 2 ವಿಭಾಗಗಳಲ್ಲಿ ಪ್ರೌಢ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಂದ
ನಡೆಯಿತು.

ಗೀತಾ ಸಾಹಿತ್ಯ ಸಂಭ್ರಮ ಕಲ್ಲಡ್ಕ ವಿಠಲ ನಾಯಕ್ ಮತ್ತು ತಂಡದವರಿಂದ ಗುರುನಮನ ಕಾರ್ಯಕ್ರಮ ಜರಗಿತು.
(ಕಳೆದ ನೂರು ವರ್ಷಗಳ ಅವಧಿಯಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಗುರುವರೇಣ್ಯರಿಗೆ ಗೌರವಾರ್ಪಣೆ)

ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಫೆರ್ನಾಂಡಿಸ್, ನಾವೂರ ಆರೋಗ್ಯ ಕ್ಲೀನಿಕ್ ವೈದ್ಯ ಡಾ| ಪ್ರದೀಪ್ ನಾವೂರ ಪ್ರಧಾನ ಭಾಷಣ ಮಾಡಿದರು.



ಹಿರಿಯ ವಿದ್ಯಾರ್ಥಿ ಕೆಂಪಯ್ಯ ಮಡಿವಾಳ, ಹಿರಿಯ ವಿದ್ಯಾರ್ಥಿ ಕೊರಗಪ್ಪ ಗೌಡ ಕುಕ್ಕೆಮಜಲು, ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ ಟಿ., ಹಳೆಯ ವಿದ್ಯಾರ್ಥಿ ವಿ. ಜೆ. ಪೌಲೋಸ್ , ಹಿರಿಯ ವಿದ್ಯಾರ್ಥಿನಿ ಶಾರದಾ ಭಂಡಾರ್ಕರ್,
ಹಿರಿಯ ವಿದ್ಯಾರ್ಥಿ ಡೊಂಬಯ್ಯ ಟಿ., ಕಲ್ಲಾಡಿ ಮಂಗಳೂರು ದ. ಕ. ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ವಿ. ಜೆ. ರೋಸ,
ಹಳೆವಿದ್ಯಾರ್ಥಿ ಸಂಘ, ಅಧ್ಯಕ್ಷ ಹಮೀದ್ ಬಿ.ಎನ್, ಹಿರಿಯ ವಿದ್ಯಾರ್ಥಿ ಉಜಿರೆ ದೈಹಿಕ ಶಿಕ್ಷಣ ಶಿಕ್ಷಕ ಶೀನ ಅಕ್ಷಯನಗರ,
ಉಜಿರೆ ಸಂತ ಅಂತೋನಿ ಚರ್ಚ್ ಮಾಜಿ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಹಿರಿಯ ವಿದ್ಯಾರ್ಥಿ ಅಬ್ದುಲ್ ಅಜೀಜ್ ಭಾಗವಹಿಸಿದ್ದರು.
ಉಪಾಧ್ಯಕ್ಷರು ಸೇಸಪ್ಪ ಟಿ. ಕಂದೂರು,ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಿದಾನಂದ ಮಂಟಮೆ, ಕಲ್ಮoಜ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಮಂಜುಳಾ ಜೆ. ಟಿ. ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಮೀದ್ ಬಿ. ಎನ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶತಮಾನೋತ್ಸವ ಸಮಿತಿ ಸುಬ್ರಾಯ ಅಕ್ಷಯನಗರ ಕಾರ್ಯಕ್ರಮ ನಿರೂಪಿಸಿದರು.
ಕಲ್ಲಡ್ಕ ಶ್ರೀ ವಿಠಲ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ಜರಗಿತು.
ಗುರುನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಗುರುವರೇಣ್ಯರು ಬಿ. ಬಾಬು ಗೌಡ ಬಾಜಿಮಾರ್, ರಘುಪತಿ ಭಟ್, ಗಿರೀಶ್ ಪ್ರಭು, ಯಶೋದ, ಜಯ, ಶಾಂತಾ,
ಪುರಂದರ ಪ್ರಭು, ಶೀಲಾವತಿ ಕೆ. ಸೀತಾ ಆರ್. ಸೇಠ್, ಗಂಗಾವತಿ ಶೆಟ್ಟಿ, ಸಾವಿತ್ರಿ,, ದೇವಿದಾಸ್, ಶಾಲಿನಿ, ಚಂಪಾವತಿ, ದಮಯಂತಿ, ಇಸಾಕ್, ಮಂಜುಳಾ ಜೆ. ಟಿ, ಸುರೇಖಾ, ಶಿಲ್ಪಾ, ಐಶ್ವರ್ಯ, ನಮಿತಾ, ಜ್ಯೋತಿ, ಹೇಮಾ ಅಡುಗೆ ಸಹಾಯಕಿ, ರಝಿಯಾ ಬಾನು, ವಿಜಯಲಕ್ಷ್ಮಿಅವರನ್ನು ಗೌರವಿಸಲಾಯಿತು.









