ಬುರುಡೆ ಪ್ರಕರಣ-ಎಸ್. ಐ.ಟಿ ಕೇಸ್ ನ ವಿಚಾರಣೆ ಪೂರ್ಣಗೊಳಿಸಿದ ನಂತರವೇ ಕಾನೂನು ಕ್ರಮದ ಬಗ್ಗೆ ಆದೇಶ-ಮುಂದಿನ ವಿಚಾರಣೆ ಜ.23ಕ್ಕೆ- ಧರ್ಮಸ್ಥಳ ಪರ ಹಾಕಿರುವ ಅರ್ಜಿ ವಿಚಾರಣೆ ಜ.14ಕ್ಕೆ ಮುಂದೂಡಿದ ಬೆಳ್ತಂಗಡಿ ನ್ಯಾಯಾಲಯ

0

ಬೆಳ್ತಂಗಡಿ: ಬುರುಡೆ ಕೇಸ್ ಬಗ್ಗೆ ಎಸ್ ಐ ಟಿ ಅಂತಿಮ ವರದಿ ಸಲ್ಲಿಸಲು ಬೆಳ್ತಂಗಡಿ ಕೋರ್ಟ್ ಸೂಚನೆ ನೀಡಿದೆ. ಇದರ ಜೊತೆ ಕೇಸ್ ಬಗ್ಗೆ ಮುಂದಿನ ವಿಚಾರಣೆಯನ್ನು ಜ.23ಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರು ಆದೇಶಿಸಿದರು. ಉಳಿದ ತನಿಖೆಯನ್ನು ಪೂರ್ಣ ಪ್ರಮಾಣದ ವರದಿ ಸಲ್ಲಿಸಿದ ನಂತರ ಕಾನೂನು ಕ್ರಮದ ಬಗ್ಗೆ ಆದೇಶಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.ಡಿ.31ರಂದು ಧರ್ಮಸ್ಥಳ ಪರ ಹಾಕಿರುವ ಅರ್ಜಿಯ ವಾದವನ್ನು ಜ.14ಕ್ಕೆ ಮುಂದೂಡಿದ್ದಾರೆ. ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಈ ಬಗ್ಗೆ ಆದೇಶ ನೀಡಿದರು.

LEAVE A REPLY

Please enter your comment!
Please enter your name here