ಅರಸಿನಮಕ್ಕಿ: ಶ್ರೀ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ-ಶೀರೂರು ವೇದ ವರ್ಧನ ಸ್ವಾಮೀಜಿ

0

ಅರಸಿನಮಕ್ಕಿ: ಪರ್ಯಾಯ ಸಂಚಾರದಲ್ಲಿರುವ ಶೀರೂರು ವೇದವರ್ಧನ ಸ್ವಾಮೀಜಿ ಬೆಳ್ತಂಗಡಿ ತಾಲೂಕಿನ ಅನೇಕ ಪುಣ್ಯ ಕ್ಷೇತ್ರಗಳ ಸಂದರ್ಶನ ಮಾಡುತ್ತಿದ್ದು ಜ. 2ರಂದು ಈಗಾಗಲೇ ಅರಸಿನಮಕ್ಕಿ ಗ್ರಾಮದ ಬೂಡುಮುಗೇರು ದೇವಸ್ಥಾನಕ್ಕೆ ಆಗಮಿಸಿದ್ದು ದೇವಳದ ಭಕ್ತರು ಸ್ವಾಮಿಗಳಿಗೆ ಪೂರ್ಣ ಕುಂಭ ಸ್ವಾಗತ ಮಾಡಿದರು.

ಇನ್ನು ಪಟ್ಟದ ದೇವರ ಪೂಜೆ ಮತ್ತು ಆಶೀರ್ವಚನ ಕಾರ್ಯಕ್ರಮ ಹಾಗೂ ನಾಗರಿಕ ಸನ್ಮಾನ ನಡೆಯಲಿದ್ದು, ಶೀರೂರು ಮಠದ ದಿವಾನರಾದ ಉದಯ ಕುಮಾರ್, ದೇವಳದ ಅನುವಂಶಿಯ ಆಡಳಿತ ಮೊಕ್ತೇಸರ ರಾಜಗೋಪಾಲ್ ಪೆರಡೇಲು,ನಾಗರಿಕ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಕಾರ್ಯಕ್ರಮದ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಮಧುಕರ್ ರಾವ್ ಮಚ್ಚಳೆ, ಸಮಿತಿ ಸದಸ್ಯರು, ಹಾಗೂ ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here