ಯುವ ವಕೀಲರ ವೇದಿಕೆಯ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷ: ಉದಯ ಕುಮಾರ್ ಬಿ.ಕೆ., ಕಾರ್ಯದರ್ಶಿ: ಯಕ್ಷಿತಾ

0

ಬೆಳ್ತಂಗಡಿ: ವಕೀಲರ ಸಂಘದ ಯುವ ವಕೀಲರ ವೇದಿಕೆಯ ಅಧ್ಯಕ್ಷರಾಗಿ ಉದಯ ಕುಮಾರ್ ಬಿ. ಕೆ., ಉಪಾಧ್ಯಕ್ಷರಾಗಿ ಜೋಸ್ನಾ ವೆಲೋನ ಕೊರೆಯ ಮತ್ತು ಅಭಿನ್ ಪ್ರಾನ್ಸಿಸ್, ಕಾರ್ಯದರ್ಶಿಯಾಗಿ ಯಕ್ಷಿತಾ, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್, ಕೋಶಾಧಿಕಾರಿಯಾಗಿ ಜಿತೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತೀಕ್ಷಾ, ಕಮಲಾಕ್ಷ, ಶ್ರೇಯ ಎಸ್ ಪಾಲೇಲಿ, ಶ್ರಾವ್ಯ, ಸುಶಾಂತ್, ಮನಿಷಾ ಮತ್ತು ನಿಶಾಂಕ್ ಆಯ್ಕೆಯಾಗಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಅಲೋಷಿಯಸ್ ಲೋಬೊ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ನೂತನ ನ್ಯಾಯಾಲಯ ಕಟ್ಟಡ ಸಮಿತಿ ರಚನೆ: ನೂತನ ನ್ಯಾಯಾಲಯ ಸಂಕೀರ್ಣದ ವಿಚಾರದಲ್ಲಿ ಕೆಲಸ ಕಾರ್ಯ ಮಾಡುವ ನಿಟ್ಟಿನಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಗೌಡರವರ ನೇತೃತ್ವದ ಕಟ್ಟಡ ಸಮಿತಿ ರಚಿಸಲಾಗಿದ್ದು ಸದಸ್ಯರನ್ನಾಗಿ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ಎ., ಹಿರಿಯ ವಕೀಲರಾದ ಮುರಳಿ ಬಿ., ನ್ಯಾಯವಾದಿ ನೋಟರಿ ನ್ಯಾಯವಾದಿ ಸಂತೋಷ್ ಕುಮಾರ್ ಮತ್ತು ನವೀನ್ ಬಿ.ಕೆ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here