ಜ. 4-6: ಶಿರ್ಲಾಲು ಬಂತಡ್ಕ ಶ್ರೀ ಬ್ರಹ್ಮಬೈದರ್ಕಳ ಗರಡಿ ಜಾತ್ರೆ

0

ಶಿರ್ಲಾಲು: ಶಿರ್ಲಾಲು, ನಲ್ಲಾರು, ಕರಂಬಾರು ಗ್ರಾಮಗಳ ಕೂಡುವಿಕೆಯಿಂದ ಬಂತಡ್ಕ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದೈವ ಕೊಡಮಾಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆ ಜ. 4ರಿಂದ 6ರವರೆಗೆ ಬಂತಡ್ಕ ಗರಡಿಯಲ್ಲಿ ನಡೆಯಲಿದೆ. ಜ. 4ರಂದು ರಾತ್ರಿ ಮಹಮ್ಮಾಯಿ ಪೂಜೆ, ಜ. 5ರಂದು ರಾತ್ರಿ ಕರ್ದೋಟ್ಟುವಿನಿಂದ ದೈವದ ಭಂಡಾರ ಬರುವುದು, ಕರಂಬಾರು ಗ್ರಾಮದ ಕಲ್ಲಾಜೆ ಯಿಂದ ಕೊಡಣಿತ್ತಾಯ ದೈವದ ಭಂಡಾರ ಬರುವುದು, ನಲ್ಲಾರಿ ನಿಂದ ಬೈದರ್ಕಳ ಭಂಡಾರ ಬರುವುದು, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 8ರಿಂದ ದಿ. ಕೇಶವ ಬಂಗೇರ ಸೂರ್ಲೊಡಿ ಸ್ಮರಣಾರ್ಥ ಸಂದೇಶ್ ಸೂರ್ಲೊಡಿ ಪ್ರಯೋಜಿಸುವ ಗಾನ ನೃತ್ಯ ವೈಭವ, ರಾತ್ರಿ 2ರಿಂದ ದೈವ ಮತ್ತು ಕೊಡಮಣಿ ತ್ತಾಯ ನೇಮ, ಜ. 6ರಂದು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8ರಿಂದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಇವರ ಸಹಕಾರ ದೊಂದಿಗೆ “ಕುಸಲ್ದ ಗೌಜಿ.” ರಾತ್ರಿ 10ರಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮ, ರಾತ್ರಿ 4ಕ್ಕೆ ಮಾಣಿಬಾಲೆ ನೇಮ ನಡೆಯಲಿದೆ ಎಂದು ಗೌರವಾಧ್ಯ ಕ್ಷ ರಮಾನಂದ ಗುಡ್ಡಾಜೆ, ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪದ್ಧರಬೈಲು, ಕಾರ್ಯದರ್ಶಿ ಎಂ.ಕೆ. ಪ್ರಸಾದ್, ಜಾತ್ರಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಸುದಲಾಯಿ, ಕಾರ್ಯದರ್ಶಿ ಪ್ರದೀಪ್ ಪಿಜಕೊಡಂಗೆ, ಕೋಶಾಧಿಕಾರಿ ರಕ್ಷಿತ್ ಪಿಜಕೊಡಂಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here