ಜ.3: ಬಳಂಜ ಬದಿನಡೆ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ, ರಂಗಪೂಜೆ

0

ಬಳಂಜ: ಬದಿನಡೆ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜ.3ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಜಯ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಚೀನ ಇತಿಹಾಸ ಹೊಂದಿರುವ ಬದಿನಡೆ ನಾಗಬ್ರಹ್ಮ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಫಲ್ಗುಣಿ ನದಿ ತಟದಲ್ಲಿರುವ ದೇವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯ ಆಧ್ಯಾತ್ಮಿಕ ಸಾನಿಧ್ಯವಾಗಿದೆ. ಅಯ್ಯಪ್ಪ ಸ್ವಾಮಿಯ ಸಾನಿಧ್ಯವಿದ್ದು ಪ್ರತೀ ವರ್ಷವೂ ಜಯ ಸಾಲಿಯಾನ್ ರವರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಮಾಲೆ ಹಾಕಿ ಶಬರಿಮಲೆ ಯಾತ್ರೆಯನ್ನು ಮಾಡುತ್ತಿದ್ದಾರೆ.

ಈ ವರ್ಷದ ಜಾತ್ರೋತ್ಸವ ದಿನದಂದು ಬೆಳಿಗ್ಗೆ ನಾಗ ದೇವರಿಗೆ ಆಶ್ಲೇಷ ಬಲಿ ಪೂಜೆ, ನಾಗತಂಬಿಲ ಸೇವೆ, ಬ್ರಹ್ಮ ಲಿಂಗೇಶ್ವರ ದೇವರಿಗೆ ಮಹಾಪೂಜೆ ನಡೆಯಲಿದೆ. ಸಂಜೆ ದುರ್ಗಾ ನಮಸ್ಕಾರ ಪೂಜೆ, ದೊಡ್ಡ ರಂಗಪೂಜೆ, ದೇವರ ಉತ್ಸವ ಬಲಿ, ಸಿರಿ ದೇವಿಗೆ ವಿಶೇಷ ಪೂಜೆ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ, ಪಂಚಶ್ರೀ ಮಹಿಳಾ ಭಜನಾ ಮಂಡಳಿ ನಾಲ್ಕೂರು, ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ನಾಲ್ಕೂರು ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಸಮಸ್ತ ಭಕ್ತ ಬಂಧುಗಳು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಧರ್ಮದರ್ಶಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here